5G In India: ಮುಂದಿನ ವರ್ಷವೇ ಭಾರತದಲ್ಲಿ 5G ನೆಟ್ವರ್ಕ್, ಭೋಪಾಲ್ ನಲ್ಲಿ ಪರೀಕ್ಷೆ..
ಈ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ 5G ಸಂಪರ್ಕ ಹೊರಬರುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಕೂಡ ತರಂಗಾಂತರ ಹರಾಜಿಗೆ ಗ್ರೀನ್ ಸಿಗ್ನಲ್ ನೀಡಿದೆ. ಟೆಲಿಕಾಂ ಅಥಾರಿಟಿ ಆಫ್ ಇಂಡಿಯಾ (TRAI) ಪ್ರಕಾರ, ದೇಶದ ಹಲವು ಭಾಗಗಳಲ್ಲಿ 5G ಸಂಪರ್ಕದ ಪ್ರಾಯೋಗಿಕ ಪರೀಕ್ಷೆಯನ್ನನಡೆಸಲಾಗುತ್ತಿದೆ. ಬಳಕೆದಾರರಿಗೆ 5G ಸಂಪರ್ಕವನ್ನು ಒದಗಿಸಲು ಟೆಲಿಕಾಂ ಸೇವಾ ಪೂರೈಕೆದಾರರು (TSP) ನಗರದ ಮೂಲಸೌಕರ್ಯವನ್ನು ಹೇಗೆ ಬಳಸಬಹುದು ಎಂಬುದನ್ನು ಕಂಡುಹಿಡಿಯಲು ಈ ಪರೀಕ್ಷೆಯನ್ನ ನಡೆಸಲಾಗುತ್ತಿದೆ.
TRAI ಪ್ರಕಾರ, ಅವರು ಭೋಪಾಲ್‌ನಲ್ಲಿ ಪ್ರಾಯೋಗಿಕ ಯೋಜನೆಯಡಿ ಟೆಲಿಕಾಂ ಸೇವಾ ಪೂರೈಕೆದಾರರ ಮೂಲಕ 5G ಸಣ್ಣ ಸೆಲ್ ಅನ್ನು ಪರೀಕ್ಷಿಸಿದ್ದಾರೆ. ಈ ಪರೀಕ್ಷೆಯ ನಂತರ, ಭೋಪಾಲ್ 5Gಯನ್ನ ಪರೀಕ್ಷಿಸಿದ ದೇಶದ ಮೊದಲ ಸ್ಮಾರ್ಟ್ ಸಿಟಿಯಾಗಿದೆ. ಟ್ರಾಫಿಕ್ ಸಿಗ್ನಲ್ ಕಂಬಗಳು, ಬೀದಿ ದೀಪದ ಕಂಬಗಳು, ಸ್ಮಾರ್ಟ್ ಪೋಲ್‌ಗಳು, ಡೈರೆಕ್ಷನ್ ಬೋರ್ಡ್‌ಗಳು, ಹೋರ್ಡಿಂಗ್‌ಗಳು, ಫುಟ್ ಓವರ್ ಬ್ರಿಡ್ಜ್‌ಗಳು ಮತ್ತು ಸಿಟಿ ಬಸ್ ಶೆಲ್ಟರ್‌ಗಳಂತಹ ಬೀದಿ ಪೀಠೋಪಕರಣಗಳನ್ನ ಭೋಪಾಲ್‌ನಲ್ಲಿ 5G ಮೂಲಸೌಕರ್ಯಕ್ಕಾಗಿ ಬಳಸಲಾಗಿದೆ.
TRAI ಭಾರತದ ಇತರ ಭಾಗಗಳಲ್ಲಿಯೂ ಪರೀಕ್ಷೆಯನ್ನು ನಡೆಸಿತು
TRAI ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರಿಗಾಗಿ 5G ಸಣ್ಣ ಸೆಲ್ ಪರೀಕ್ಷೆಯನ್ನು ಸಹ ನಡೆಸಿದೆ. ಗುಜರಾತಿನ ಕಾಂಡ್ಲಾ ಬಂದರು ಮತ್ತು GMR ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ TRAI 5G ಅನ್ನು ಪರೀಕ್ಷಿಸಿದೆ. ಕಾಂಡ್ಲಾ ಬಂದರು ಭಾರತದ ಮೊದಲ ಬಂದರು ಮತ್ತು GMR ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 5G ಅನ್ನು ಪರೀಕ್ಷಿಸಿದ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಆದರೂ ಈ ಪರೀಕ್ಷೆಗಳ ಫಲಿತಾಂಶಗಳ ಬಗ್ಗೆ TRAI ಬಹಿರಂಗಪಡಿಸಿಲ್ಲ.
5G ಆಗಮನದ ನಂತರ ಏನಾಗುತ್ತೆ… ?
ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ 5G ಸೇವೆಗಳನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ. 5G ಭಾರತವನ್ನ ತಲುಪಲು ಏಪ್ರಿಲ್ 2023 ರವರೆಗೆ ತೆಗೆದುಕೊಳ್ಳಬಹುದು. 5G ಆಗಮನದ ನಂತರ, ಬಳಕೆದಾರರು ಕೆಲವೇ ಸೆಕೆಂಡುಗಳಲ್ಲಿ ಅತಿದೊಡ್ಡ ಫೈಲ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. 5G ಪ್ರಾರಂಭದ ನಂತರ, ದೇಶದಲ್ಲಿ ಕೃತಕ ಬುದ್ಧಿಮತ್ತೆಯ ಮೇಲೆ ಹೆಚ್ಚಿನ ಕೆಲಸವನ್ನು ಮಾಡಬಹುದು. ಸೆಲ್ಫ್ ಡ್ರೈವ್ ಕಾರುಗಳು, ಸ್ಮಾರ್ಟ್ ಆಫೀಸ್‌ಗಳು ಮತ್ತು ಸ್ಮಾರ್ಟ್ ಸಿಟಿಗಳಂತಹ ಯೋಜನೆಗಳಲ್ಲಿ ಕೆಲಸ ಮಾಡುವುದು ಸುಲಭವಾಗುತ್ತದೆ.