5G Auction:1.45 ಲಕ್ಷ ಕೋಟಿ ಮೀರಿದ 5G ತರಂಗಾಂತರದ ಬಿಡ್…
ಎರಡು ವರ್ಷಗಳ ಪ್ರಯೋಗದ ನಂತರ, ಭಾರತದಲ್ಲಿ 5G ತರಂಗಾಂತರದ ಹರಾಜು ಪ್ರಾರಂಭವಾಗಿದೆ. ಬಹುನಿರೀಕ್ಷಿತ 5G ತರಂಗಾಂತರದ ಬಿಡ್ ಮೊತ್ತವು 1.45 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಮಂಗಳವಾರದಂದು(ನಿನ್ನೆ) ನಾಲ್ಕು ಸುತ್ತುಗಳ ಹರಾಜು ಮುಗಿದಿದ್ದು ಇಂದು ಐದನೇ ಸುತ್ತಿನ ಹರಾಜು ನಡೆಯಲಿದೆ. 700 MHz ಬ್ಯಾಂಡ್ ತರಂಗಾಂತರಗಳಿಗೆ ಬಿಡ್‌ಗಳನ್ನು ಸ್ವೀಕರಿಸಲಾಗಿದೆ.
ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಜೊತೆಗೆ ಮತ್ತೊಂದು ಹೊಸ ಕಂಪನಿ ಅದಾನಿ ಗ್ರೂಪ್ 5ಜಿ ಹರಾಜಿನಲ್ಲಿ ಭಾಗವಹಿಸಿದ್ದವು. 5ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಭಾಗಿಯಾಗಿರುವ ಅದಾನಿ ಗ್ರೂಪ್ ಕಂಪನಿಯ ಹೆಸರು ಅದಾನಿ ಡೇಟಾ ನೆಟ್‌ವರ್ಕ್.
ಅಕ್ಟೋಬರ್ 2022 ರ ವೇಳೆಗೆ ದೇಶದಲ್ಲಿ 5G ನೆಟ್‌ವರ್ಕ್‌ನ ವಾಣಿಜ್ಯ ಬಳಕೆ ಪ್ರಾರಂಭವಾಗಲಿದೆ ಎಂದು ಕೆಲವು ವರದಿಗಳು ಹೇಳುತ್ತಿವೆ, ಆದರೆ ಯೋಜನೆಗೆ ಎಷ್ಟು ವೆಚ್ಚವಾಗಲಿದೆ ಎಂಬುದು ಇನ್ನೂ ರಹಸ್ಯವಾಗಿ ಉಳಿದಿದೆ.
ದೂರಸಂಪರ್ಕ ಇಲಾಖೆಯು ಮೊದಲ ಹಂತದಲ್ಲಿ 5ಜಿ ನೆಟ್ವರ್ಕ್ ಬಿಡುಗಡೆಯಾಗುವ 13 ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ,
ಬೆಂಗಳೂರು
ದೆಹಲಿ
ಹೈದರಾಬಾದ್
ಗುರುಗ್ರಾಮ
ಲಕ್ನೋ
ಪುಣೆ
ಚೆನ್ನೈ
ಕೋಲ್ಕತ್ತಾ
ಗಾಂಧಿನಗರ
ಜಾಮ್ನಗರ
ಮುಂಬೈ
ಅಹಮದಾಬಾದ್
ಚಂಡೀಗಢ
TRAI ನಿಂದ 5G ನೆಟ್ವರ್ಕ್ ಪರೀಕ್ಷಿಸಿದ ಮೊದಲ ನಗರ ಭೋಪಾಲ್. ಖಾಸಗಿ ಕಂಪನಿಗಳು ದೆಹಲಿ, ಮುಂಬೈ, ಪುಣೆ ಮತ್ತು ಗುರುಗ್ರಾಮ್‌ನಂತಹ ಅನೇಕ ನಗರಗಳಲ್ಲಿ 5G ಅನ್ನು ಪರೀಕ್ಷಿಸುತ್ತಿದ್ದರೂ, TRAI ಭೋಪಾಲ್‌ನಲ್ಲಿ ಮೊದಲ ಬಾರಿಗೆ 5G ನೆಟ್ವರ್ಕ್ ಅನ್ನ ಪರೀಕ್ಷಿಸಿದೆ.
ಇದನ್ನೂ ಓದಿ : Vedic education – ಭಾರತದ ಮೊದಲ ವೇದ ಶಿಕ್ಷಣ ಮಂಡಳಿ ಶೀಘ್ರದಲ್ಲೇ ಸ್ಥಾಪನೆ: ಕೇಂದ್ರ ಸರ್ಕಾರ