ಕಾನ್ಪುರದಲ್ಲಿ ಬಸ್ ಸರಣಿ ಅಪಘಾತ 6 ಮಂದಿ ಸಾವು 12 ಮಂದಿಗೆ ಗಾಯ
ಚಾಲಕನ ನಿಯಂತ್ರಣ ತಪ್ಪಿದ ಬಸ್ ಅಡ್ಡಾದಿಡ್ಡಿ ಚಲಿಸಿದ್ದರಿಂದ ಸರಣಿ ಅಪಘಾತ ಸಂಭವಿಸಿ ಆರು ಮಂದಿ ಮೃತಪಟ್ಟು 12 ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರ ನಗರದ ಟಾಟಾ ಮಿಲ್ ಕ್ರಾಸ್ ಬಳಿ ಎಲೆಕ್ಟ್ರಿಕಲ್ ಬಸ್ ನಿಯಂತ್ರಣ ಕಳೆದುಕೊಂಡು ಹಲವು ವಾಹನಗಳಿಗೆ ಗುದ್ದಿದೆ. ಘಟನೆಯಲ್ಲಿ ಮೂರು ಕಾರು ಹಲವು ಬೈಕ್ ಗಳಿಗೆ ಹಾನಿಯಾಗಿದೆ. ಪೊಲೀ ಟ್ರಾಫಿಕ್ ಬೂತ್ ಗೆ ಡಿಕ್ಕೆ ಹೊಡೆದು ವೇಗ ಕಡಿಮೆ ಮಾಡಿಕೊಂಡ ಬಸ್ ಟ್ರಕ್ ಗೆ ಗುದ್ದಿ ನಿಂತಿದೆ. ಅಪಘಾತದ ನಂತರ ಬಸ್ ಚಾಲಕ ಪರಾರಿಯಾಗಿದ್ದಾನೆ, 11 ಗಂಟೆಗಳ ನಂತರ ಆತನನ್ನ ಬಂಧಿಸಲಾಗಿದೆ. ಗಾಯಗಳುಗಳನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ದಾಖಲಿಸಲಾಗಿದೆ.
ಅಪಘಾತದ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಅಪಘಾತದ ಸುದ್ದಿ ಕೇಳಿ ಬೇಸರವಾಯಿತು ಮೃತರ ಕುಟುಂಬಗಳಿಗೆ ಸಂತಾಪ ಕೋರುತ್ತೇನೆ ಗಾಯಳುಗಳು ಬೇಗನೇ ಗುಣಮುಖರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.








