ಹಿಜಾಬ್ ಗಾಗಿ ಪರೀಕ್ಷೆಯನ್ನು ಬಹಿಷ್ಕರಿಸಿದ ಯಾದಗಿರಿ ವಿದ್ಯಾರ್ಥನಿಯರು
ಯಾದಗಿರಿ: ಉಡುಪಿಯಲ್ಲಿ ಹಿಜಾಬ್ ವಿದ್ಯಾರ್ಥಿನಿಯರು ಪರೀಕ್ಷೆ ತೊರೆದಿದ್ದು, ಈಗ ಕಲ್ಯಾಣ ಕರ್ನಾಟಕ ಯಾದಗಿರಯಲ್ಲೂ ವಿದ್ಯಾರ್ಥಿನಿಯರು ಹಿಜಾಬ್ ಗಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ತೊರೆದಿದ್ದಾರೆ.
ಇಂದು ಕಲಾ ವಿಭಾಗದ ಅರ್ಥಶಾಸ್ತ್ರ ಪರೀಕ್ಷೆ ಇದ್ದು, ಯಾದಗಿರಿಯ ಪದವಿ ಪೂರ್ವ ಬಾಲಕಿಯರ ಕಾಲೇಜ್ ಪರೀಕ್ಷಾ ಕೇಂದ್ರಲ್ಲಿ 6 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಬೇಕಾಗಿತ್ತು, ಹೀಗಾಗಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯಲು ಬಂದಿದ್ದರು. ಈ ವೇಳೆ ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯಲು ಪರೀಕ್ಷಾ ಮೇಲ್ವಿಚಾರಕರು ಅನುಮತಿ ನೀಡಿಲ್ಲ. ಹೀಗಾಗಿ ಪರೀಕ್ಷೆಯನ್ನು ಬಹಿಷ್ಕರಿಸಿದ್ದಾರೆ.
ಏಪ್ರಿಲ್ 23 ಕ್ಕೆ ಗಣಿತ ಪರೀಕ್ಷೆ ನಡೆದಿದ್ದು, ಈ ಪರೀಕ್ಷೆಗೆ ಹಿಜಾಬ್ ಗಾಗಿ ಹೈಕೋರ್ಟ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರು ಗೈರಾಗಿದ್ದರು. ವಿದ್ಯಾರ್ಥಿನಿಯರಾದ ಅಲ್ಮಾಸ್, ಹಜ್ರಾ, ಆಯೇಷಾ ಪರೀಕ್ಷೆಗೆ ಗೈರಾಗಿದ್ದರು. ಅಲ್ಮಾಸ್ ಹಾಲ್ ಟಿಕೆಟ್ ಪಡೆದು ಪರೀಕ್ಷೆಗೆ ಗೈರಾಗಿದ್ದರು. ಇನ್ನೂ ಹಜ್ರಾ, ಆಯೇಷಾ ಹಾಲ್ ಟಿಕೇಟ್ ಪಡೆಯುವುದಕ್ಕೂ ಬಂದಿಲ್ಲ.