ಎಮ್ಮೆ ಸತ್ತ ಕಾರಣಕ್ಕೆ ನೆರೆಮನೆಯ ಬಾಲಕನ ಕೊಲೆ ಮಾಡಿದ ದಂಪತಿಗಳು
ಮಹಾರಾಷ್ಟ್ರ : ಎಮ್ಮೆಯೊಂದು ಸಾವನಪ್ಪಿದ ಹಿನ್ನೆಲೆ ದಂಪತಿಗಳು ಸೇರಿ 6 ವರ್ಷದ ಬಾಲಕನನ್ನು ಕೊಂದು ಅಮಾನವೀಯತೆ ಮೆರೆದಿದ್ದಾರೆ. ಎಮ್ಮೆ ಸಾಯಲು ಮಾಟಮಂತ್ರ ಕಾರಣ ಎಂಬ ಅನುಮಾನದಿಂದ ಇವರು ಈ ರೀತಿ ಮಾಡಿರೋದಾಗಿ ತಿಳಿದುಬಂದಿದೆ. ಇಂತಹ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ಗುಜರಾತ್ ನಲ್ಲಿ ‘ಲವ್ ಜಿಹಾದ್’ ವಿರೋಧಿ ಕಾನೂನು ಜಾರಿಯಾಗುತ್ತಿಲ್ಲ..!
ಗ್ರಾಮದ ಹೊರವಲಯದಲ್ಲಿ ಆಟವಾಡುತ್ತಿದ್ದ ಬಾಲಕ ಕಾಣೆಯಾಗ್ತಿದ್ದಂತೆ ಗಾಬರಿಗೊಂಡಿದ್ದ ಪೋಷಕರು ಊರೆಲ್ಲಾ ಹುಡುಕಾಡಿದ್ರು ಆತ ಸಿಕ್ಕಿರಲಿಲ್ಲ. ಆದ್ರೆ ಮುಂಜಾನೆ ಆತನ ಮೃತದೇಹವು ಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ ಆರೋಪಿ ದಂಪತಿಗಳು ಸಿಕ್ಕಿ ಬಿದ್ದಿದ್ದಾರೆ. ಮಾಟಮಂತ್ರ ಮಾಡಿ ಎಮ್ಮೆ ಸಾವಿಗೆ ಆತನ ಮನೆಯವರು ಕಾರಣವಾಗಿದ್ದಾರೆಂದು ಅನುಮಾನಿಸಿ ಅವರ ಮಗನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಡಿರ್ವೊಸ್ ಕೇಸ್ ವಾಪಾಸ್ ಪಡೆಯದಕ್ಕೆ ಪತ್ನಿಯ ಖಾಸಗಿ ಫೋಟೋಗಳ ಹರಿಬಿಟ್ಟ!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







