ಕೊರೊನಾ 1ನೇ ಡೋಸ್ ಲಸಿಕೆ ಪಡೆದ 12-14 ವಯೋಮಾನದ ಶೇ 60 ರಷ್ಟು ಮಕ್ಕಳು
ನವದೆಹಲಿ: ದೇಶದಲ್ಲಿ ಕೊರೊನಾ ತಡೆಗಟ್ಟಲು 12-14 ವಯಸ್ಸಿನ ಮಕ್ಕಳಿಗೂ ಲಸಿಕೆ ನೀಡುತ್ತಿದ್ದು, ಶೇ 60% ಕ್ಕಿಂತ ಹೆಚ್ಚು ಯುವಕರು 1 ನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಸಚಿವ ಮನ್ಸುಖ್ ಮಾಂಡವಿಯಾ “12-14 ವಯೋಮಾನದ 60% ಕ್ಕಿಂತ ಹೆಚ್ಚು ಯುವಕರು ಕೋವಿಡ್-19 ಲಸಿಕೆಯ 1 ನೇ ಡೋಸ್ ಅನ್ನು ಸ್ವೀಕರಿಸಿದ್ದಾರೆ. ಲಸಿಕೆಯನ್ನು ಪಡೆದ ನನ್ನ ಎಲ್ಲಾ ಯುವ ಸ್ನೇಹಿತರಿಗೆ ಅಭಿನಂದನೆಗಳು. ನಾವೆಲ್ಲರೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ! ಇದನ್ನು ಮುಂದುವರಿಸೋಣ” ಎಂದಿದ್ದಾರೆ.
ಇನ್ನೂ ತಾತ್ಕಾಲಿಕ ವರದಿಯ ಪ್ರಕಾರ ಇಂದು ಬೆಳಿಗ್ಗೆ 7 ಗಂಟೆಯವರೆಗೆ 15-18 ವರ್ಷ ವಯಸ್ಸಿನ 5,84,25,991 ಮಂದಿಗೆ ಮೊದಲ ಡೋಸ್ ಲಸಿಕೆಗಳನ್ನು ಮತ್ತು 4,22,40,428 ಮಂದಿಗೆ ಎರಡನೇ ಡೋಸ್‌ಗಳನ್ನು ನೀಡಲಾಗಿದೆ.
ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕೆಯನ್ನು 16 ಜನವರಿ 2021 ರಂದು ಪ್ರಾರಂಭಿಸಲಾಯಿತು. ಕೋವಿಡ್-19 ಲಸಿಕೆಯ ಸಾರ್ವತ್ರಿಕರಣದ ಹೊಸ ಹಂತವವನ್ನು 21 ಜೂನ್ 2021 ರಂದು ಪ್ರಾರಂಭಿಸಲಾಯಿತು.