6ನೇ ಪತ್ನಿ ಲೈಂಗಿಕ ಕ್ರಿಯೆಗೆ ಒಪ್ಪದಕ್ಕೆ, 7ನೇ ಮದುವೆಗೆ ತಯಾರಾದ 63ರ ವೃದ್ಧ..!
ಗುಜರಾತ್ : 63 ವರ್ಷದ ವೃದ್ಧನೋರ್ವ ಬರೋಬ್ಬರಿ 6 ಮದುವೆಯಾಗಿದ್ದು, ಇದೀಗ 7 ನೇ ಮದುವೆಗೆ ತಯಾರಿ ನಡೆಸಿದ್ದಾನೆ. ಹೌದು 6 ನೇ ಪತ್ನಿ ಲೈಂಗಿಕ ಕ್ರಿಯೆಗೆ ಒಪ್ಪದ ಹಿನ್ನೆಲೆ ಆತ 7ನೇ ಮದುವೆಗೆ ರೆಡಿಯಾಗಿ ಹೆಣ್ಣು ಹುಡುಕಾಟ ಶುರುಮಾಡಿದ್ದಾನೆ. ಇಂತಹ ವಿಚಿತ್ರ ಘಟನೆ ಬೆಳಕಿಗೆ ಬಂದಿರುವುದು ಗುಜರಾತ್ ನ ಸೂರತ್ ನಲ್ಲಿ.
ವಿದ್ಯಾವಂತ ದಂಪತಿಯ ಮೂಡನಂಬಿಕೆಗೆ ಬಲಿಯಾದರು ಇಬ್ಬರು ಹೆಣ್ಮಕ್ಕಳು..!
63 ವರ್ಷದ ಅಯ್ಯುಬ್ ಎಂಬಾತ ತನಗಿಂತ 21 ವರ್ಷದ ಚಿಕ್ಕ ವಯಸ್ಸಿನ ಮಹಿಳೆ ಜೊತೆಗೆ 6ನೇ ಮದುವೆಯಾಗಿದ್ದನು. ಆದರೆ 6ನೇ ಪತ್ನಿ ತನ್ನ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳಲು ಇಚ್ಛಿಸಿಲ್ಲ. ಅಲ್ಲದೆ ತನಗೆ ಸೋಂಕು, ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ ಎಂದು ದೂರುತ್ತಿದ್ದಳು. ಎಂದು ಆರೋಪಿಸಿದ್ದಾನೆ.
ಚರ್ಮದಿಂದ ಚರ್ಮದ ಸಂಪರ್ಕವಿಲ್ಲದೆ ಎಸಗಿದ ಕೃತ್ಯ ಲೈಂಗಿಕ ದೌರ್ಜನ್ಯವಲ್ಲ : ಬಾಂಬೆ ಹೈಕೋರ್ಟ್
ಇನ್ನು ಅಯ್ಯುಬ್ 6ನೇ ಪತ್ನಿಗೆ ಇದು 2ನೇ ಮದುವೆ. ಆಕೆಯ ಪತಿ ನಿಧನರಾಗಿದ್ದ ಬಳಿಕ ಆಕೆ ವೃದ್ಧನನ್ನ ಮದುವೆಯಾಗಿದ್ದಳು. ಇವರು ಕಳೆದ ಸೆಪ್ಟೆಂಬರ್ ನಲ್ಲಿ ಮದುವೆಯಾಗಿದ್ದರು. ಮದುವೆಯಾದ ಕೆಲ ತಿಂಗಳಲ್ಲೇ ದಂಪತಿ ಬೇರ್ಪಟ್ಟಿದ್ದರು. ಹೀಗಾಗಿ ಅಯ್ಯುಬ್ 7ನೇ ಮದುವೆಗಾಗಿ ವಧುವಿನ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾನೆ. ಆದ್ರೆ 6ನೇ ಪತ್ನಿಗೆ ಈತ ಈಗಾಗಲೇ 5 ಮದುವೆಯಾಗಿದ್ದ ವಿಚಾರ ಗೊತ್ತಿರಲಿಲ್ಲ. ಯಾವಾಗ ಈತ 7ನೇ ಮದುವೆಗೆ ಹೆಣ್ಣು ಹುಡುಕಾಟ ಶುರು ಮಾಡಿದ್ದಾನೋ ಆಗಲೇ ಈಕೆಗೆ ಆಘಾತಕಾರಿ ವಿಚಾರ ಗೊತ್ತಾಗಿದೆ. ಇದಾದ ನಂತರ ಹೆಂಡತಿ ಇದೀಗ ವೃದ್ಧ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel