ಕಾರವಾರ : ಯುವಕನೊಬ್ಬ ಆನ್ ಲೈನ್ ಗೇಮ್ ನ ಚಟದಿಂದಾಗಿ ಬರೋಬ್ಬರಿ 65 ಲಕ್ಷ ರೂ. ಕಳೆದುಕೊಂಡು ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.
ವಿಜೇತ್ ಶಾಂತಾರಾಮ ಹೆಗಡೆ (37) ಎಂಬ ಯುವಕನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ಶಿರಸಿ ತಾಲೂಕಿನ ಕುಳವೆ ಬಳಿ ಈ ಘಟನೆ ನಡೆದಿದೆ. ಈ ಯುವಕ ಕಳೆದ ಎರಡ್ಮೂರು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ. ಆದರೆ, ಮರಳಿ ಮಾತ್ರ ಮನೆಗೆ ಬಂದಿರಲಿಲ್ಲ. ಹುಟುಕಾಟ ನಡೆಸಿದಾಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ವಿಜೇತ್ ಸುಮಾರು 65 ಲಕ್ಷ ರೂ. ಗೂ ಹೆಚ್ಚಿನ ಹಣವನ್ನು ಆನ್ ಲೈನ್ ಗೇಮ್‍ನಲ್ಲಿ ಕಳೆದುಕೊಂಡಿದ್ದ ಎನ್ನಲಾಗಿದೆ. ಸದ್ಯ ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








