ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್ ಧರಿಸಿದೆ ಓಡಾಡಿದವರಿಗೆ ಕಾದಿದೆ ಶಾಕ್ . ಮಾಸ್ಕ್ ಧರಿಸಿದೆ ಹೊರಗಡೆ ಓಡಾಡಿದಕ್ಕೆ ಒಂದೆ ದಿನಕ್ಕೆ 69,400 ರೂಪಾಯಿ ದಂಡವನ್ನು ಬಿಬಿಎಂಪಿ ವಸೂಲಿ ಮಾಡಿದೆ.
ಮಾಸ್ಕ್ ಧರಿಸದೇ ಹೊರಗಡೆ ಬರುವಂತಿಲ್ಲ. ಒಂದು ವೇಳೆ ಮಾಸ್ಕ್ ಧರಿಸದೇ ಹೊರಗಡೆ ಬಂದರೆ ದಂಡ ಹಾಕಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರ ಅನ್ವಯ ಬಿಬಿಎಂಪಿ ದಂಡ ಹಾಕುವ ಅಧಿಕಾರವನ್ನು ಮಾರ್ಷಲ್ಗಳಿಗೆ ನೀಡತ್ತು.
ಹಾಗಾಗಿ ಮಾರ್ಷಲ್ಗಳು ನಿನ್ನೆಯಿಂದ ನಗರದ ವಿವಿಧ ಭಾಗಗಳಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವವರಿಂದ ದಂಡ ಸಂಗ್ರಹ ಮಾಡುತ್ತಿದ್ದಾರೆ. ಇಂದು ಒಂದೇ ದಿನಕ್ಕೆ 347 ಜನರಿಂದ 69,400 ರೂಪಾಯಿ ದಂಡವನ್ನು ವಸೂಲಿ ಮಾಡಿದ್ದಾರೆ ಎಂದು ಪಾಲಿಕೆ ಮಾಹಿತಿ ನೀಡಿದೆ.








