ಉತ್ತರ ಜಪಾನ್‌ನಲ್ಲಿ 7.4 ತೀವ್ರತೆಯ ಭೂಕಂಪ – 4 ಮಂದಿ ಸಾವು
ಜಪಾನ್‌ನಲ್ಲಿ ನಿನ್ನೆ ರಾತ್ರಿ ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 97 ಜನರು ಗಾಯಗೊಂಡಿದ್ದಾರೆ. ಭೂಕಂಪದ ಸಮಯದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಅವರ ಸಾವಿನ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಇಂದು ಹೇಳಿದ್ದಾರೆ.
ಭೂಕಂಪದಿಂದಾಗಿ ಫುಕುಶಿಮಾ ಮತ್ತು ಮಿಯಾಗಿ ನಡುವೆ ರೈಲು ಭಾಗಶಃ ಹಳಿತಪ್ಪಿದೆ, ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ಹೇಳಿದರು. ಸರ್ಕಾರವು ಹಾನಿಯ ಪ್ರಮಾಣವನ್ನು ಅಂದಾಜು ಮಾಡುತ್ತಿದೆ ಮತ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ತನ್ನ ಕೈಲಾದಷ್ಟು ಮಾಡುವುದಾಗಿ ಭರವಸೆ ನೀಡಿದೆ ಎಂದು ಪ್ರಧಾನಿ ಹೇಳಿದರು.
ಈ ಪ್ರದೇಶಲ್ಲಿ 11 ವರ್ಷಗಳ ಹಿಂದೆ ಮಾರಣಾಂತಿಕ 9.0 ಭೂಕಂಪ ಮತ್ತು ಸುನಾಮಿಯಿಂದ ನಗರ ಧ್ವಂಸಗೊಂಡಿತು, ಇದು 18,000 ಜನರನ್ನು ಬಲಿತೆಗೆದುಕೊಂಡಿತ್ತು. ಈ ಭೂಕಂಪದಲ್ಲಿ ಪುಕುಶಿಮಾ ಪರಮಾಣು ರಿಯಾಕ್ಟರ್ ಸೋರುವಿಕೆಗೆ ಕಾರಣವಾಗಿತ್ತು.
7.4 magnitude earthquake struck north Japan killing 4 people








