ಕೊರೊನಾ ರಣಕೇಕೆ ನಡುವೆ ಮದ್ಯ ಸಿಗದೇ ಸ್ಯಾನಿಟೈಸರ್ ಸೇವಿಸಿದ 7 ಜನ ಸಾವು..!
ಮುಂಬೈ : ದೇಶಾದ್ಯಂತ ಜನ ಕೋವಿಡ್ ಹಾವಳಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಎಷ್ಟೋ ಕಡೆ ಹಾಸಿಗೆ ಬೆಡ್ ಸಿಗದೇ ಸೋಂಕಿತರು ನರಳಿ ನರಳಿ ಪ್ರಾಣ ಬಿಡ್ತಿದ್ದಾರೆ. ಎಲ್ಲಿ ನೋಡಿದ್ರೂ ಸಾವು ನೋವುಗಳೇ ಸಂಭವಿಸುತ್ತಿರುವ ಹೊತ್ತಲಿ, ಎಣ್ಣೆ ಸಿಗದೇ ಕುಡುಕರು ಸ್ಯಾನಿಟೈಸರ್ ಕುಡಿದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಏಳು ಜನರು ಸಾವನ್ನಪ್ಪಿರುವ ಎರಡು ಪ್ರತ್ಯೇಕ ಘಟನೆ ಮಹಾರಾಷ್ಟ್ರದ ಯವತಮಲ್ ಜಿಲ್ಲೆಯಲ್ಲಿ ನಡೆದಿದೆ.
ತೆಲಿ ಫೀಲ್ ವ್ಯಾಪ್ತಿಯ ದತ್ತಾ ಲಾಂಜೇವಾರ್ ಮತ್ತು ನೂತನ್ ಸ್ಯಾನಿಟೈಸರ್ ಕುಡಿದು ಮನೆಗೆ ತೆರಳಿದ್ದರು. ರಾತ್ರಿ ಇಬ್ಬರಿಗೀ ತಲೆನೋವು ಹೆಚ್ಚಾದ ಹಿನ್ನೆಲೆ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲ ಸಮಯದ ಬಳಿಕ ಇಬ್ಬರ ಸಾವಾಗಿದೆ.
ಆಯತ್ ನಗರದಲ್ಲಿ ಸಂತೋಷ್ ಮೆಹ್ರಾ, ಗಣೇಶ್ ನಾಂದೇಕರ್, ಗಣೇಶ್ ಶೆಲಾರ್ ಮತ್ತು ಸುನಿಲ್ ಡೆಂಗಲೆ ಸಹ ಸ್ಯಾನಿಟೈಸರ್ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮತ್ತೋರ್ವನ ಹೆಸರು ತಿಳಿದು ಬಂದಿಲ್ಲ.
ಮಹಾರಾಷ್ಟ್ರದಲ್ಲಿ ಲಾಕ್ಡೌತನ್ ಘೋಷಣೆಯ ಪರಿಣಾಮ ಮದ್ಯದಂಗಡಿಗಳು ಬಂದ್ ಆಗಿವೆ. ಇದ್ರಿಂದ ಕುಡುಕರು ಮದ್ಯ ಸಿಗದೇ ಪರದಾಡುವಂತಾಗಿದೆ. ಹೀಗಾಗಿ ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಹಾಗಂತ ಇಂತಹ ಕೇಸ್ ಪತ್ತೆಯಾಗಿರೋದು ಇದೇ ಮೊದಲೇನಲ್ಲ. ಈ ಹಿಮದೆಯೂ ಕಲೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಇದೇ ಒರೀತಿ ಸ್ಯಾನಿಟೈಸರ್ ಸೇವಿಸಿ ಅನೇಕರು ಮತಪಟ್ಟಿದ್ದರೆ, ಅನೇಕರು ತೀವ್ರ ಅಸ್ವಸ್ಥಗೊಂಡಿದ್ದರು.