ನವದೆಹಲಿ : ವಿಶ್ವದಾದ್ಯಂತ ಕೊರೊನಾ ಆರ್ಭಟ ಮುಂದುವರಿದಿದ್ದು, ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರ ಪೈಕಿ 7.1 ಮಂದಿಗೆ ಕೋವಿಡ್-19 ಸೋಂಕು ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
‘ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 7.1ರಷ್ಟು ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದು ಜಾಗತಿಕ ಅಂಕಿ-ಅಂಶಕ್ಕೆ ಹೋಲಿಸಿದರೆ, ತುಂಬಾ ಕಡಿಮೆ ಪ್ರಮಾಣದಲ್ಲಿದೆ. ಇನ್ನು ಜಗತ್ತಿನಾದ್ಯಂತ ಒಂದು ಲಕ್ಷ ಜನಸಂಖ್ಯೆಗೆ ಸುಮಾರು 60 ಸೋಂಕು ಪ್ರಕರಣಗಳು ಖಚಿತವಾಗಿವೆ. ಆರಂಭದಲ್ಲೇ ಆಕ್ರಮಣಕಾರಿಯಾಗಿ ಕ್ರಮಗಳನ್ನು ಕೈಗೊಂಡಿದ್ದರ ಫಲಿತಾಂಶ ಈಗ ಪ್ರದರ್ಶನವಾಗುತ್ತಿವೆ’ ಎಂದು ಸಚಿವಾಲಯ ತಿಳಿಸಿದೆ.
ವಿಶ್ವದಾದ್ಯಂತ ಇಲ್ಲಿವರೆಗೆ ಸುಮಾರು 45.25 ಲಕ್ಷ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸುಮಾರು 60 ಪ್ರಕರಣಗಳು ಇವೆ.








