ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ‍್ಯ ಸಾಕಾರಗೊಂಡಾಗಲೇ ರಾಜಕೀಯ ಸ್ವಾತಂತ್ರ‍್ಯ ಪರಿಪೂರ್ಣಗೊಳ್ಳುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
74ನೇ ಸ್ವಾತಂತ್ರ‍್ಯೋತ್ಸವ ಅಂಗವಾಗಿ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಶುಭಕೋರಿದ್ದು, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ‍್ಯ ಸಾಕಾರಗೊಂಡಾಗಲೇ ರಾಜಕೀಯ ಸ್ವಾತಂತ್ರ‍್ಯ ಪರಿಪೂರ್ಣಗೊಳ್ಳುವುದು. ಆ ದಿಕ್ಕಿನೆಡೆಗೆ ದೃಢಚಿತ್ತದಿಂದ ಹೆಜ್ಜೆ ಹಾಕುವ ಸಂಕಲ್ಪವನ್ನು 74ನೇ ಸ್ವಾತಂತ್ರ‍್ಯೊತ್ಸವದ ದಿನ ನಾವೆಲ್ಲರೂ ಕೈಗೊಳ್ಳೋಣ. ನಾಡಿನ ಸಮಸ್ತ ಜನಕೋಟಿಗೆ ಸ್ವಾತಂತ್ರ‍್ಯೋತ್ಸವದ ಶುಭಾಶಯಗಳು”.
ಇದೇ ವೇಳೇ ಸಂಗೊಳ್ಳಿ ರಾಯಣ್ಣರನ್ನು ಸ್ಮರಿಸಿರುವ ಸಿದ್ದರಾಮಯ್ಯ, “ನಾವು ಅನುಭವಿಸುತ್ತಿರುವ ಸ್ವಾತಂತ್ರ‍್ಯ, ವೀರ ಸಂಗೊಳ್ಳಿ ರಾಯಣ್ಣನವರಂತಹ ದೇಶಪ್ರೇಮಿಗಳ ತ್ಯಾಗ-ಬಲಿದಾನದ ಫಲ. ಈ ಸ್ವಾತಂತ್ರ‍್ಯವನ್ನು ರಕ್ಷಿಸಿ ಉಳಿಸಿಕೊಳ್ಳುವ ನಿರಂತರ ಹೋರಾಟದಲ್ಲಿ ನಾವು ವಿರಮಿಸದಂತೆ ಸಂಗೊಳ್ಳಿ ರಾಯಣ್ಣನ ಸಾಹಸಗಾಥೆ ಸದಾ ಎಚ್ಚರಿಸುತಿರಲಿ. ನಿತ್ಯ ಸ್ಮರಣೀಯ ರಾಯಣ್ಣನಿಗೆ ನನ್ನ ಗೌರವದ ನಮನ ಎಂದು ಬರೆದುಕೊಂಡಿದ್ದಾರೆ.