ನವದೆಹಲಿ : ದೇಶದೆಲ್ಲೆಡೆ ಇಂದು 74ನೇ ಸ್ವಾತಂತ್ರ‍್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದ್ದಾರೆ.
ಮೇಜರ್ ಶ್ವೇತಾ ಪಾಂಡೆ ಎಂಬುವವರು ಪ್ರಧಾನಿ ನರೇಂದ್ರ ಮೋದಿಗೆ ಧ್ವಜಾರೋಹಣಕ್ಕೆ ನೆರವಾದರು. ಇವರು ಈ ವರ್ಷದ ಜೂನ್‌ನಲ್ಲಿ ಮಾಸ್ಕೋದಲ್ಲಿ ನಡೆದ ವಿಕ್ಟರಿ ಡೇ ಪೆರೇಡ್‌ನಲ್ಲಿ ಭಾರತೀಯ ಮಿಲಿಟರಿ ತುಕಡಿಯ ಭಾಗವಾಗಿದ್ದರು. ಅಲ್ದೇ ಇವರು ಭಾರತೀಯ ಸೇನೆಯ 505 ಮೂಲ ಕಾರ್ಯಾಗಾರದಲ್ಲಿ ಇಎಂಇ ಅಧಿಕಾರಿಯಾಗಿದ್ದರು. ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
ರಾಜ್ಘಾಟ್ಗೆ ಆಗಮಿಸಿದ ಪ್ರಧಾನಿ ಮೋದಿ ಗಾಂಧೀಜಿ ಸಮಾಧಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.








