ಗೋವಾದಲ್ಲಿ 5 ಗಂಟೆಯವರೆಗೆ ಗೋವಾದಲ್ಲಿ ಶೇ 75.29 ರಷ್ಟು ಮತದಾನ Saaksha Tv
ವಿಧಾನಸಭೆ ಚುನಾವಣೆ 2022: ಇಂದು ಗೋವಾ ಮತ್ತು ಉತ್ತರಾಖಂಡನಲ್ಲಿ ಮೊದಲ ಹಂತದ ಚುನಾವಣೆ ನಡೆದರೆ, ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ಚುನಾವಣೆ ನಡೆದಿದೆ.
ಗೋವಾದಲ್ಲಿ 40 ಸ್ಥಾನಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು. ಮತ್ತು ಉತ್ತರಾಖಂಡದಲ್ಲಿ 70 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಇನ್ನೂ ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದ್ದು ಒಟ್ಟು 55 ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ.
ಇನ್ನೂ ಸಂಜೆ 5 ಗಂಟೆಯವರೆಗೆ ಗೋವಾದಲ್ಲಿ 75.29% ಮತ್ತು ಉತ್ತರಾಖಂಡದಲ್ಲಿ 59.37% ಮತದಾನವಾಗಿದೆ. ಅಲ್ಲದೇ ಉತ್ತರ ಪ್ರದೇಶ 2ನೇ ಹಂತದ ಮತದಾನದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ 51.93% ಮತದಾನವಾಗಿದ್ದು, ಸಂಜೆ 5 ಗಂಟೆಯವರೆಗೆ 60.44% ಮತದಾನವಾಗಿದೆ
ಒಟ್ಟು 2.02 ಕೋಟಿ ಮತದಾರರು ಇಂದು ಉತ್ತರ ಪ್ರದೇಶದ 55 ವಿಧಾನಸಭಾ ಸ್ಥಾನಗಳಿಗೆ ಎರಡನೇ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ 586 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. 2.02 ಕೋಟಿಯಲ್ಲಿ 1.08 ಕೋಟಿ ಪುರುಷರು, 0.94 ಕೋಟಿ ಮಹಿಳೆಯರು ಮತ್ತು 1,269 ತೃತೀಯಲಿಂಗಿ ಮತದಾರರಿದ್ದಾರೆ. ಎರಡನೇ ಹಂತದಲ್ಲಿ 23,404 ಮತಗಟ್ಟೆಗಳು ಮತ್ತು 12,544 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ವರದಿಯಾಗಿದೆ.