75 ವರ್ಷಗಳ ಸ್ವಾತಂತ್ರ್ಯ ನಂತರ ಗ್ರಾಮಕ್ಕೆ ಬಂತು ಕರೇಂಟ್
ನವದೆಹಲಿ: ಸ್ವಾತಂತ್ರ್ಯ ಬಂದು 15 ವರ್ಷಗಳ ನಂತರ ಜಮ್ಮು&ಕಾಶ್ಮೀರ ಹಳ್ಳಿಯೊಂದಕ್ಕೆ ಕರೇಂಟ್ ಬಂದಿದೆ. ಈ ಮೂಲಕ ಅಂಧಕಾರದಲ್ಲಿದ್ದ ಗ್ರಾಮ ಬೆಳಕಿಗೆ ಬಂದಿದೆ.
ಹೌದು ಜಮ್ಮು&ಕಾಶ್ಮೀರದ ಉಧಮ್ಪುರದ ಗ್ರಾಮವಾದ ಸದ್ದಲ್ಗೆ ಕೇಂದ್ರ ಸರ್ಕಾರದ ‘ಅನ್ಟೈಡ್ ಗ್ರ್ಯಾಂಟ್ಸ್’ ಯೋಜನೆಯಡಿ ಬುಧವಾರ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಬಂದಿದೆ. ಈ ಮೂಲಕ ಈ ಗ್ರಾಮ ಕತ್ತಲೆಯಿಂದ ಮುಕ್ತಿ ಪಡೆದಿದೆ. ಈ ಮೂಲಕ ಗ್ರಾಮಕ್ಕೆ ಬೆಳಕು ಬಂದಿರುವುದು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಗ್ರಾಮದ ಪೋಷಕರು ಆಶಾಭಾವನೆ ಹೊಂದಿದ್ದಾರೆ.
ಈ ಮೊದಲು ಸಂಜೆಯ ಸಮಯದಲ್ಲಿ ಈ ಗ್ರಮಕ್ಕೆ ಬೆಳಕಿನ ಮೂಲ ಆಧಾರವೆಂದರೆ ಮೇಣದ ಬತ್ತಿ ಮತ್ತು ಎಣ್ಣೆ ದೀಪಗಳು. ಇದಿರಂದ ವಿದ್ಯಾರ್ಥಿಗಳಿಗೆ, ವಯೋವೃದ್ಧಿರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಆದರೆ ಇದಕ್ಕೆ ಈಗ ಮುಕ್ತಿ ಸಿಕ್ಕಿದೆ. ಗ್ರಾಮಸ್ಥರು ತಮ್ಮ ಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಸಿಬೇಕೆಂದು ರಾಜ್ಯ ಸರಕಾರಕ್ಕೆ ಸಾಕಷ್ಟು ಆಗ್ರಹಿಸಿದರು, ಫಲಪ್ರದವಾಗಿರಲಿಲ್ಲ.
ಗ್ರಾಮದವರ ಬಹುದಿನಗಳ ಬೇಡಿಕೆ ಈಗ ಫಲಿಸಿದೆ. ಇದರಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಪಂಚಾಯತ್ ರಾಜ್ ಕಾಯ್ದೆಯ ಮೂರು ಹಂತದ ವ್ಯವಸ್ಥೆಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೇ ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಆಡಳಿತ, ಉಧಮ್ಪುರ ಆಡಳಿತ ಮತ್ತು ವಿದ್ಯುತ್ ಇಲಾಖೆಗೆ ಈ ಹಳ್ಳಿಯ ಮಕ್ಕಳು ಕೃತಜ್ಞರಾಗಿದ್ದಾರೆ.
ಈ ಕುರಿತು ಮಾತನಾಡಿದ 8ನೇ ತರಗತಿ ವಿದ್ಯಾರ್ಥಿ ಪ್ಯಾರ್ ಸಿಂಗ್ ಈ ಹಿಂದೆ ವಿದ್ಯುತ್ ಇಲ್ಲದ ಕಾರಣ ಎಣ್ಣೆ ದೀಪದ ಮೂಲಕ ಓದಬೇಕಾಗಿತ್ತು. ಈಗ ನಮಗೆ ಅದರಿಂದ ಮುಕ್ತಿ ಸಿಕ್ಕಿದ್ದೆ ಬಹಳಷ್ಟು ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಹಳ್ಳಿಯ ಹಿಂದಿನ ಪೀಳಿಗೆಯವರು ತಮ್ಮ ಮನೆಗಳಲ್ಲಿ ವಿದ್ಯುತ್ ಅನ್ನೇ ನೋಡಿರಲಿಲ್ಲ. ಇಷ್ಟು ಸುದೀರ್ಘ ಕಾಯುವಿಕೆಯ ನಂತರ ನಮಗೆ ವಿದ್ಯುತ್ ಒದಗಿಸಿದ ಇಲಾಖೆಗೆ ಇಂದು ನಾವು ಕೃತಜ್ಞರಾಗಿರುತ್ತೇವೆ ಎಂದು 72 ವರ್ಷದ ಬದರಿನಾಥ್ ಹೇಳಿದ್ದಾರೆ.