75ನೇ ಸ್ವಾತಂತ್ರ್ಯ ದಿನಾಚರಣೆ – ಗಡಿಯಲ್ಲಿ ಸಿಹಿ ವಿನಿಮಯ ಮಾಡಿಕೊಂಡ ಭಾರತ – ಪಾಕ್ ಸೈನಿಕರು..!
ಇಂದು ಭಾರತೀಯರ ಪಾಲಿಗೆ ಅತ್ಯಂತ ಸಂತಸದ ದಿನ.. ಭಾರತೀಯರು ಒಗ್ಗೂಡಿ ಸಂಭ್ರಮಿಸುವ ದಿನ.. ದೇಶಕ್ಕೆ ಸ್ಯಾಂತಂತ್ರ್ಯ ಸಿಕ್ಕಿ ಇಂದಿಗೆ 75 ವರ್ಷಗಳು ಕಳೆದಿವೆ.. ಆದದ್ರೆ ಕೊರೊನಾ ಹಾವಳಿಯಿಂದಾಗಿ ಈ ಬಾರಿ ಅತ್ಯಂತ ಸರಳವಾಗಿ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಗಿದೆ.. ಇನ್ನೂ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಅಥವ ರಿವಾಜಿನಂತೆ ಗಡಿಭಾಗದಲ್ಲಿ ಪಾಕಿಸ್ತಾನ ಭಾರತ ಸೈನಿಕರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ.
ಭಾರತೀಯ ಸೇನೆಯು ಪಾಕಿಸ್ತಾನದ ಸೇನಾ ಪಡೆಗಳೊಂದಿಗೆ ಮೆಂಧರ್‌ನ ತಟಪಾನಿ ಕ್ರಾಸಿಂಗ್ ಪಾಯಿಂಟ್ ಮತ್ತು ಪೂಂಚ್ ಜಿಲ್ಲೆಯ ಎಲ್‌ಒಸಿ ಉದ್ದಕ್ಕೂ ರಾವಲಕೋಟ್ ಕ್ರಾಸಿಂಗ್ ಪಾಯಿಂಟ್‌ನಲ್ಲಿ ಸಿಹಿ ಮತ್ತು ಅಭಿನಂದನೆಗಳನ್ನು ವಿನಿಮಯ ಮಾಡಿಕೊಂಡಿದೆ’ ಎಂದು ರಕ್ಷಣಾ ಇಲಾಖೆಯ ವಕ್ತಾರರು ಮಾಹಿತಿ ನೀಡಿದ್ದಾರೆ.
75ನೇ ಸ್ವಾತಂತ್ರ್ಯ ದಿನ : ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಧ್ವಜಾರೋಹಣ
ಭಾರತೀಯ ಸೇನೆ ಮತ್ತು ಬಿಎಸ್‌ಎಫ್ ಸಿಬ್ಬಂದಿ ಭಾನುವಾರ ಪಾಕಿಸ್ತಾನದ ಗಡಿ ಭದ್ರತಾ ಯೋಧರೊಂದಿಗೆ ಗಡಿ ನಿಯಂತ್ರಣ ರೇಖೆ ಮತ್ತು ಅಂತರಾಷ್ಟ್ರೀಯ ಗಡಿಯಲ್ಲಿ ಸಿಹಿ ವಿನಿಮಯ ಮಾಡಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಹಿ ವಿನಿಮಯ ಮಾಡಿಕೊಂಡ ಬಳಿಕ ಪರಸ್ಪರ ಕೈಕುಲುಕಿದರು.