#777 ಚಾರ್ಲಿ ಶೂಟಿಂಗ್ ಮುಕ್ತಾಯ – ಭಾವುಕರಾದ ಚಿತ್ರತಂಡ.
ರಕ್ಷಿತ್ ಶೆಟ್ಟಿ ನಟನೆಯ ಬಹು ನಿರಿಕ್ಷಿತ ಚಿತ್ರ #777 ಚಾರ್ಲಿ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿಕೊಂಡು ತರೆಗೆ ಬರಲು ರೆಡಿಯಾಗಿದೆ. ಮೂರು ವರ್ಷಗಳ ಹಿಂದೆ ಶುರುವಾಗಿದ್ದ ಈ ಸಿನಿಮಾ ಕರೋನಾ ಕಾರಣಗಳಿಂದ ಸಾಕಷ್ಟು ಅಡೆತಡೆಗಳನ್ನ ಎದುರಿದಸಿ ಶೂಟಿಂಗ್ ಮುಗಿಸಿದೆ. ಸತತ 164 ದಿನಗಳ ಕಾಲ ಚಿತ್ರಿಕರಿಸಿ ಮುಗಿಸಿದ ಖುಷಿಯಲ್ಲಿ ಚಿತ್ರತಂಡ ಕುಂಬಾಳಕಾಯಿ ಥರಹದ ಕೇಕ್ ಕಟ್ ಮಾಡಿ ಸಂಭ್ರಮಿಸಿತು..
ಪಂಚಭಾಷೆಗಳಲ್ಲಿ ಟೀಸರ್ ಮತ್ತು ಹಾಡುಗಳನ್ನ ರಿಲೀಸ್ ಮಾಡಿರುವ ಚಿತ್ರತಂಡ ಬೆಟ್ಟದಷ್ಟು ನಿರೀಕ್ಷೆಯನ್ನ ಹುಟ್ಟುಹಾಕಿದೆ. ರಕ್ಷಿತ್ ಶೆಟ್ಟಿ ಜೊತೆಗೆ ಕರ್ಣ ಪಾತ್ರದಾರಿ ನಾಯಿಯ ಜುಗಲ್ಬಂಧಿ ನೋಡುಗರ ಮನಸ್ಸನ್ನ ಇನ್ನಿಲ್ಲದಂತೆ ಸೆಳೆಯುತ್ತಿದೆ.
ಮನುಷ್ಯರಿಂದ ನಟನೆಯನ್ನೆ ತೆಗೆಸುವುದೇ ಕಷ್ಟ ಅದರಲ್ಲೂ ಮೂಕ ಪ್ರಾಣಿಯಿಂದ ನಟನೆ ತೆಗೆಸಿರುವವುದು.. ಸಿನಿಮಾ ನಿರ್ಮಾಣಕ್ಕೆ ಚಿತ್ರತಂಡ ಪಟ್ಟಿರುವ ಕಷ್ಟವನ್ನ ತಿಳಿಸುತದೆ. ಕಿರಣ್ ರಾಜ್ ನಿರ್ದೇಶನದಲ್ಲಿ ಮೂಡಿಬಂದಿರು ಚಿತ್ರ ಈ ವರ್ಷದ ಕೊನೆಯಲ್ಲಿ ಡಿಸೆಂಬರ್ 31 ರಂದು ಐದು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.