777 charlie
ಪ್ರಸ್ತುತ ಚಂದನವನದಲ್ಲಿ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ನಿಲ್ಲುವ ಸಿನಿಮಾ ಅಂದ್ರೆ ಅದು ನಮ್ಮ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ “777 ಚಾರ್ಲಿ”. ಈ ಸಿನಿಮಾ ಕುರಿತಾಗಿ ನಮ್ಮ ಸಿಂಪಲ್ ಸ್ಟಾರ್ ಇಂದು ಬಿಗ್ ಅನೌನ್ಸ್ ಮೆಂಟ್ ಮಾಡುವ ಮೂಲಕ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ. ಹೌದು. ಇತ್ತೀಚೆಗೆ ರಕ್ಷಿತ್ ಅವರು ನನವೆಂಬರ್ 6 ಕ್ಕೆ ಬಿಗ್ ಸರ್ಪ್ರೈಸ್ ಕಾದಿದೆ ಎಂದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ರು. ಇದೀಗ ಈ ಕುತೂಹಲಕ್ಕೆ ತೆರೆಎಳೆದಿದ್ದಾರೆ. ಅದೇನೆಂದ್ರೆ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ 777 ಚಾರ್ಲಿ ಚಿತ್ರಕ್ಕೆ ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ಎಂಟ್ರಿ ಕೊಟ್ಟಿದ್ದಾರೆ.
ಹೌದು ತಮಿಳಿನ ನಟ ಬಾಬಿ ಸಿಂಹ “777 ಚಾರ್ಲಿ” ಸಿನಿಮಾದಲಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಬಾಬಿ ಸಿಂಹ ಮೊದಲ ಬಾರಿಗೆ ಚಂದನವನಕ್ಕೆ ಎಂಟ್ರಿಕೊಡ್ತಿದ್ದು, ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಅಂದ್ಹಾಗೆ ಇಂದು ಬಾಬಿ ಸಿಂಹ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಅವರ ಜನ್ಮದಿನದ ಪ್ರಯುಕ್ತ ಸಿನಿಮಾದ ಪೋಸ್ಟರ್ ಅನ್ನು ಸಹ ರಿವೀಲ್ ಮಾಡಿ ಸಿಂಹ ಅವರ ಬರ್ತ್ ಡೇ ಗೆ ವಿಶ್ ಮಾಡಿದೆ ಸಿನಿತಂಡ. ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಕ್ಷಿತ್ ‘ಸಂತೋಷ ಮತ್ತು ಉತ್ಸುಕತೆಯಿಂದ ಈ ವಿಶೇಷ ದಿನದಂದೆ ಬಾಬಿ ಸಿಂಹ ಅವರನ್ನು ಸ್ವಾಗತ ಮಾಡುತ್ತಿದ್ದೇವೆ. ಹುಟ್ಟುಹಬ್ಬದ ಶುಭಾಶಯಗಳು. ನಮ್ಮ ಸಿನಿಮಾ ಪಯಣದಲ್ಲಿ ನೀವು ಭಾಗಿಯಾಗಿರುವುದು ತುಂಬಾ ಸಂತೋಷವಾಗುತ್ತೆ’ ಎಂದು ಟ್ವೀಟ್ ಮಾಡಿದ್ದಾರೆ.
777 ಚಾರ್ಲಿ ಸಿನಿಮಾದ ಚಿತ್ರೀಕರಣ ಈಗಾಗಲೇ ಬಹುತೇಕ ಮುಕ್ತಾಯವಾಗಿದೆ. ಈ ಚಿತ್ರ ಪರಮ್ವಾ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲ್ಮ್ ಬ್ಯಾನರ್ ನಲ್ಲಿ ಸಿದ್ಧವಾಗುತ್ತಿದೆ. ಚಿತ್ರಕ್ಕೆ ಕಿರಣ್ ರಾಜ್ ಆಕ್ಷನ್ ಹೇಳುತ್ತಿದ್ದಾರೆ. ಸದ್ಯ ಬಾಬಿ ಸಿಂಹ ಕಮಲ್ ಹಾಸನ್ ಅಭಿನಯದ ಇಂಡಿಯನ್-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಇನ್ನೂ ನಾಲ್ಕೈದು ತಮಿಳು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕನ್ನಡ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ.
‘ದುಬಾರಿ’ ಯಾಗಿ ಬರುತ್ತಿರುವ ಆಕ್ಷನ್ ಪ್ರಿನ್ಸ್ : ‘IM Very Costly” ಎಂದ ಧ್ರುವ..!
ಇತ್ತ ರಕ್ಷಿತ್ ಶೆಟ್ಟಿ ಸಹ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಮತ್ತೆ ರಿಷಬ್ ಜೊತೆ ಒಂದಾಗ್ತಾಯಿರೋದಾಗಿ ಅನೌನ್ಸ್ ಮಾಡಿ ಅಭಿಮಾನಿಗಳನ್ನ ಥ್ರಿಲ್ ಆಗುವಂತೆ ಮಾಡಿದ್ರು. ಅಂದ್ರೆ ಸ್ಯಾಂಡಲ್ ವುಡ್ ನಲ್ಲಿ ಕ್ರೇಜ್ ಕ್ರಿಯೇಟ್ ಮಾಡಿ ಸೂಪರ್ ಹಿಟ್ ಆಗಿದ್ದ ಸೆನ್ಷೇಶನಲ್ ಸಿನಿಮಾವಾದ ಕಿರಿಕ್ ಪಾರ್ಟಿ ಯ ಮುಂದಿನ ಭಾಗ ಕಿರಿಕ್ ಪಾರ್ಟಿ 2 ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ಮತ್ತೆ ಸ್ಟಾರ್ ಕಾಂಬಿನೇಷನ್ ರಿಷಬ್ ಹಾಗೂ ರಕ್ಷಿತ್ ಜೋಡಿ ಒಂದಾಗ್ತಾಯಿದೆ.
777 charlie
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel