![]()
ಮಂಗಳೂರು : ದಿನಕಳೆದಂತೆಲ್ಲಾ ಹೊಸತನ ಜನರನ್ನ ಸೆಲೆಯುತ್ತೆ. ಹಾಗೆಯೇ ಕಾಲ ಕ್ರಮೇಣ ಮಲ್ಟಿಪ್ಲೆಕ್ಸ್ ಗಳು, ಐನಾಕ್ಸ್ ಗಳ ಹಾವಳಿಯಿಂದಾಗಿ ಈಗಾಗಲೇ ಸಿಂಗಲ್ ಥಿಯೇಟರ್ ಗಳಿಗೆ ಸಿಕ್ಕಾಪಟ್ಟೆ ಹೊಡೆತ ಬಿದ್ದಿತ್ತು. ಆದರೂ ಹಾಗೋ ಹೀಗೋ ಚಿತ್ರಮಂದಿರಗಳು ಇನ್ನೂವರೆಗೂ ಅಸ್ತತ್ವದಲ್ಲಿವೆ. ಇದರ ನಡುವೆ ಕೊರೊನಾ ಹಾವಳಿಯಿಂದಾಗಿ ಥಿಯೇಟರ್ ಗಳು 6 ತಿಂಗಳಿನಿಂದಲು ಬಂದ್ ಆಗಿವೆ. ಇದು ಥಿಯೇಟರ್ ಮಾಲೀಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿಬಿಟ್ಟಿದೆ. ಒಂದೆಡೆ ಕೊರೊನಾ ಸಂಕಷ್ಟ ದೂರಾಗುವ ಲಕ್ಷಣ ಕಾಣುತ್ತಿಲ್ಲ. ಮತ್ತೊಂದೆಡೆ ಚಿತ್ರಮಂದಿರಗಳ ತೆರವಿಗೆ ಅವಕಾಶ ಯಾವಾಗ ಸಿಗುತ್ತೆ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಹೋಗ್ಲಿ ಥಿಯೇಟರ್ ಗಳನ್ನು ಮತ್ತೆ ಓಪನ್ ಮಾಡಿದರೆ ಜನರು ಬರುತ್ತಾರಾ. ಅದು ಗೊತ್ತಿಲ್ಲ. ಇದೆಲ್ಲಾ ಗೊಮದಲಗಳಿರುವಾಗಲೇ ಅಮೇಜನ್, ನೆಟ್ ಫ್ಲಿಕ್ಸ್ ನಂತಹ ಡಿಜಿಟಲ್ ಮಿಡಿಯಾಗಳ ಹಾವಳಿಗೆ ಸಿಂಗಲ್ ಥಿಯೇಟರ್ ಗಳ ಅಸ್ತಿತ್ವವೇ ಕಳೆದುಹೋಗುತ್ತಿದೆಯೇ ಎಂಬ ಪ್ರಶ್ನೆ ಮೂಡೋದು ಸಹಜ.
ಇದೆಲ್ಲಾ ಸಂಕಷ್ಟಕ್ಕೆ ಸಿಲುಕಿ ಈಗಾಗಲೇ ರಾಜ್ಯದ ಹಲವು ಚಿತ್ರಮಂದಿರಗಳು ಧರೆಗುರುಳಿಬಿಟ್ಟಿದೆ. ಇದರ ಮಧ್ಯೆ 79 ವರ್ಷ ಇತಿಹಾಸವಿದ್ದ ಮಂಗಳೂರಿನ ಸೆಂಟ್ರಲ್ ಟಾಕೀಸ್ ಇದೀಗ ನೆಲಸಮವಾಗುತ್ತಿದೆ. ಚಿತ್ರಮಂದಿರವಿದ್ದ ಜಾಗದಲ್ಲಿ ಬೃಹತ್ ಮಾಲ್ ಒಂದು ತಲೆ ಎತ್ತಲಿದೆ. ಹೀಗಾಗಿ ರಾಜ್ಯದ ಅತಿ ಹಳೆಯ ಚಿತ್ರಮಂದಿರಗಳಲ್ಲಿ ಒಂದಾದ ಸೆಂಟ್ರಲ್ ಟಾಕೀಸ್ ಅನ್ನು ನೆಲಸಮ ಮಾಡಲಾಗುತ್ತಿದೆ. ಈ ಚಿತ್ರಮಂದಿರ 1941 ರಲ್ಲಿ ನಿರ್ಮಾಣಗೊಂಡು ದಶಕಗಳ ಕಾಲ ಜನರನ್ನು ರಂಜಿಸಿತ್ತು.









