ಕರ್ನಾಟಕ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ 7ನೇ ತರಗತಿಯ ಮೌಲ್ಯಾಂಕನ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾ.16ರಿಂದ ಮಾ.21ರ ವರೆಗೆ ಮೌಲ್ಯಂಕನ ಪರೀಕ್ಷೆ ನಡೆಯಲಿದ್ದು, ಈ ಮೊದಲು ಮಾ.9ರಿಂದ ಮಾ.14ರವರೆಗೆ ಎಂದು ಪ್ರಕಟಿಸಿತ್ತು. ದ್ವಿತೀಯ ಪಿಯುಸಿ ಪರೀಕ್ಷೆ ಮಾ 9ರಿಂದ 14ರ ವರೆಗೆ ನಡೆಯುತ್ತಿದ್ದು, ಹಲವು ಸಮಸ್ಯೆಗಳು ಎದುರಾಗಬಹುದು ಎಂಬ ಕಾರಣಕ್ಕೆ ಮೌಲ್ಯಂಕ ಪರೀಕ್ಷೆಯನ್ನು ಒಂದು ವಾರ ಮುಂದೂಡಲಾಗಿದೆ.
7ನೇ ತರಗತಿಯ ಪರಿಷ್ಕೃತ ಮೌಲ್ಯಾಂಕನ ವೇಳಾಪಟ್ಟಿ :
ಮಾ.16: ಪ್ರಥಮ ಭಾಷೆ
ಮಾ.17: ದ್ವಿತೀಯ ಭಾಷೆ
ಮಾ.18: ತೃತೀಯ ಭಾಷೆ
ಮಾ.19: ಗಣಿತ
ಮಾ.20: ವಿಜ್ಞಾನ
ಮಾ.21: ಸಮಾಜ ವಿಜ್ಞಾನ
ನಂದಿನಿ ಹಾಲಿನ ದರ ಏರಿಕೆ :KMF ಅಧ್ಯಕ್ಷರ ಸ್ಪಷ್ಟನೆ
KMF (ಕರ್ನಾಟಕ ಹಾಲು ಒಕ್ಕೂಟ) ಅಧ್ಯಕ್ಷ ಭೀಮಾ ನಾಯ್ಕ ಅವರು, ಸದ್ಯಕ್ಕೆ ನಂದಿನಿ ಹಾಲಿನ ದರದಲ್ಲಿ ಯಾವುದೇ ಏರಿಕೆ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ...