ADVERTISEMENT
Thursday, April 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Politics

8 ಕೋಟಿ ರೂ. ಇದ್ದ ಆಸ್ತಿ ಮೌಲ್ಯ ಒಂದೇ ವರ್ಷದಲ್ಲಿ 62 ಕೋಟಿ ಆಗಿದ್ದೇಗೆ?

ಸಿಎಂ ಸಿದ್ದರಾಮಯ್ಯರಿಗೆ ಪ್ರಶ್ನೆಗಳ ಸುರಿಮಳೆ

Author2 by Author2
July 9, 2024
in Politics, ರಾಜಕೀಯ, ರಾಜ್ಯ
Share on FacebookShare on TwitterShare on WhatsappShare on Telegram

ಸೈಟ್ ಹಗರಣ ಸಿಎಂ ಸಿದ್ದರಾಮಯ್ಯರಿಗೆ ಬೆನ್ನು ಬಿದ್ದಂತಿದೆ. ಅದು ಈಗ ಸಿದ್ದರಾಮಯ್ಯರಿಗೆ ಬೇತಾಳವಾಗಿ ಬಿಟ್ಟಿದೆ. ಹಲವು ವರ್ಷಗಳ ಅವರ ರಾಜಕಾರಣದಲ್ಲಿ ತಪ್ಪು ಹಿಡಿದು ಜಡಿಯಬೇಕೆಂದು ಕಾಯುತ್ತಿದ್ದ ವಿರೋಧಿಗಳಿಗೆ ಈಗ ಅಸ್ತ್ರ ಸಿಕ್ಕಂತಾಗಿದೆ.

ಸಿದ್ದರಾಮಯ್ಯ ಅವರ ಪತ್ನಿಗೆ ದಾನವಾಗಿ ಸಿಕ್ಕಿರುವ 3.16 ಎಕರೆ ಜಮೀನಿಗೆ ಪರಿಹಾರಕ್ಕೆ ಪರ್ಯಾಯವಾಗಿ 62 ಕೋಟಿ ರೂ. ಕೇಳಿರುವ ಸಿದ್ದರಾಮಯ್ಯ ಅವರ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆಗೆ ನಿಲ್ಲುವ ಸಂದರ್ಭದಲ್ಲಿ ಸಿದ್ದರಾಮಯ್ಯ ನೀಡಿದ ದಾಖಲೆಯಲ್ಲಿ ಆ ಆಸ್ತಿಯ ಮೌಲ್ಯವನ್ನು ಕೇವಲ 8.33 ಕೋಟಿ ಎಂದು ತೋರಿಸಿದ್ದಾರೆ. ಆದರೆ, ಸದ್ಯ ಆ ಆಸ್ತಿಯ ಮೌಲ್ಯ ದಿಢೀರಾಗಿ 65 ಕೋಟಿ ರೂ. ನೀಡುವಂತೆ ಕೇಳಿರುವುದು ಸಾಕಷ್ಟು ಕುತೂಹಲ, ಗೊಂದಲ ಹಾಗೂ ಅನುಮಾನಕ್ಕೆ ಕಾರಣವಾಗುತ್ತಿದೆ.

Related posts

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

April 2, 2026
ಕಾವೇರಿದ ಉಪಚುನಾವಣೆ ಅಖಾಡ; ಹಾಲಿ ಸಿಎಂ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

ಕಾವೇರಿದ ಉಪಚುನಾವಣೆ ಅಖಾಡ; ಹಾಲಿ ಸಿಎಂ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

April 2, 2026

ಹೀಗಾಗಿಯೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಜಮೀನಿಗೆ ಪರ್ಯಾಯವಾಗಿ ಮುಡಾ ನೀಡಿರುವ 14 ನಿವೇಶನಗಳು ಈಗ ಚರ್ಚೆಯ ವಿಷಯವಾಗಿದೆ. ಆರೋಪಕ್ಕೆ ಕಾರಣವಾಗಿವೆ. 2023ರಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ವಿಧಾನಸಭಾ ಚುನಾವಣಾ ಅಫಿಡವಿಟ್‌ನಲ್ಲಿ ಮುಡಾ ನೀಡಿರುವ 14 ಸೈಟ್‌ಗಳನ್ನು ಉಲ್ಲೇಖಿಸಿ, ಅದರ ಮಾರುಕಟ್ಟೆ ಮೌಲ್ಯ 8.33 ಕೋಟಿ ರೂ. ಎಂದು ತೋರಿಸಿದ್ದಾರೆ. ಕೇವಲ ಒಂದು ವರ್ಷದಲ್ಲಿ ಇದರ ಮೌಲ್ಯ 62 ಕೋಟಿ ರೂ. ಆಗಿದ್ದು ಹೇಗೆ ಎಂದು ಈಗ ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ.

ಪಾರ್ವತಿ ಅವರ ಜಮೀನನ್ನು ಸ್ವಾಧೀನಪಡಿಸಿಕೊಂಡ ಕಾರಣಕ್ಕೆ 2020ರಲ್ಲಿ ಮುಡಾ 50:50 ಅನುಪಾತದಲ್ಲಿ 14 ನಿವೇಶನ ನೀಡಿತ್ತು. ಆದರೆ, ಇದಕ್ಕೂ ಮುನ್ನ 2018 ರ ಚುನಾವಣಾ ಅಫಿಡವಿಟ್‌ನಲ್ಲಿಯೂ ಸಿದ್ದರಾಮಯ್ಯ ಅವರು ಪತ್ನಿ ಹೆಸರಿನಲ್ಲಿ 3.16 ಎಕರೆ ಜಾಗ ಇರುವುದನ್ನು ನಮೂದಿಸಿ, ಅದರ ಮಾರುಕಟ್ಟೆ ಮೌಲ್ಯ 25 ಲಕ್ಷ ರೂ. ಎಂದು ತೋರಿಸಿದ್ದಾರೆ. ಆದರೆ, ಈಗ ಅದರ ಮೌಲ್ಯ ಮಾತ್ರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.

2010ರಲ್ಲಿ ಸಿಎಂ ಪತ್ನಿ ಪಾರ್ವತಿ ಅವರಿಗೆ ಅವರ ಸಹೋದರ ಮಲ್ಲಿಕಾರ್ಜುನ ಅವರಿಂದ ಕೆಸರೆ ಗ್ರಾಮದಲ್ಲಿದ್ದ 3.16 ಎಕರೆ ಜಾಗ ದಾನವಾಗಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು 2013ರ ವಿಧಾನಸಭಾ ಚುನಾವಣಾ ಅಫಿಡವಿಟ್‌ನಲ್ಲಿ ಪತ್ನಿಗೆ ಬಂದಿರುವ ಜಮೀನಿನ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ. ಆದರೆ, 2018ರಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಪತ್ನಿಗಿರುವ 3.16 ಎಕರೆ ಜಮೀನನ್ನು ಉಲ್ಲೇಖಿಸಿ, ಅದಕ್ಕೆ ಮಾರುಕಟ್ಟೆ ಮೌಲ್ಯ 25 ಲಕ್ಷ ರೂ. ಇರುವುದನ್ನು ಅಫಿಡವಿಟ್‌ನಲ್ಲಿ ತೋರಿಸಿದ್ದಾರೆ. 2023ರಲ್ಲಿ ವರುಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಮುಡಾ ಜಮೀನಿಗೆ ಬದಲಿಗೆ 50:50ರ ಅನುಪಾತದಲ್ಲಿ 14 ನಿವೇಶನ (ಒಟ್ಟು 37,190.09 ಚದರ ಅಡಿ)ವನ್ನು ಪಾರ್ವತಿ ಅವರಿಗೆ ವಿಜಯನಗರದಲ್ಲಿ ನೀಡಿರುವುದನ್ನು ಸಿದ್ದರಾಮಯ್ಯ ಅಫಿಡವಿಟ್‌ನಲ್ಲಿಇದನ್ನು ಉಲ್ಲೇಖಿಸಿ ಅದಕ್ಕೆ 8.35 ಕೋಟಿ ಮಾರುಕಟ್ಟೆ ಮೌಲ್ಯ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಪತ್ನಿ ಅವರ ಜಮೀನು ಇದ್ದದ್ದು ಕೆಸರೆ ಗ್ರಾಮದ ಸರ್ವೆ ನಂಬರ್‌ 464ರಲ್ಲಿ. ಆದರೆ, ಮುಡಾ ವಿಜಯನಗರದಲ್ಲಿ ನಿವೇಶನ ನೀಡಿದೆ. ವಿಜಯನಗರ 4ನೇ ಹಂತ ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿದೆ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿರುವವರ ವ್ಯಕ್ತಿಗಳ ಮಾಹಿತಿಯಂತೆ, ವಿಜಯನಗರ 4ನೇ ಹಂತದಲ್ಲಿ ಪ್ರತಿ ಚದರ ಅಡಿಗೆ 5-8 ಸಾವಿರ ರೂ. ಇದ್ದು, ದೇವನೂರು ಬಡಾವಣೆಯಲ್ಲಿ ಪ್ರತಿ ಚದರ ಅಡಿಗೆ 6 ಸಾವಿರ ರೂ. ವರೆಗೆ ಇದೆ. ಅತ್ಯಂತ ಬೆಲೆ ಬಾಳುವ ವಿಜಯನಗರ 4ನೇ ಹಂತದಲ್ಲಿ ಒಟ್ಟು 14 ನಿವೇಶನಗಳನ್ನು ಹಂಚಿಕೆ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದ ಆಕ್ರೋಶವೋ ಅಥವಾ ಕುತೂಹಲವೋ ತಿಳಿಯದಾಗಿದೆ.

2018ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಪತ್ನಿಗೆ ಸೇರಿರುವ 3.16 ಎಕರೆ ಜಮೀನಿಗೆ 25 ಲಕ್ಷ ಮಾರುಕಟ್ಟೆ ಮೌಲ್ಯವಿದೆ ಎಂದು ತೋರಿಸಿದ್ದಾರೆ. ಇದೀಗ ಏಕಾಏಕಿ 62 ಕೋಟಿ ರೂ. ಕೊಟ್ಟರೆ ಮರಳಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಆರ್ಥಿಕ ತಜ್ಞ, ದಾಖಲೆಯ ಬಜೆಟ್ ಮಂಡಿಸಿರುವ ಸಿಎಂ ಲೆಕ್ಕಾಚಾರವೇ ಅರ್ಥವಾಗುತ್ತಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

Tags: 8 Crore Rs. 62 crores in a single year?
ShareTweetSendShare
Join us on:

Related Posts

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

by Shwetha
April 2, 2026
0

ರಾಜ್ಯದಲ್ಲಿ ನೀತಿ ಸಂಹಿತೆ ಮುಗಿದ ತಕ್ಷಣ ಒಳಮೀಸಲಾತಿ ಜಾರಿಗೆ ತರಲಾಗುತ್ತದೆ ಎಂದು ಆಹಾರ ಸಚಿವ K. H. ಮುನಿಯಪ್ಪ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ...

ಕಾವೇರಿದ ಉಪಚುನಾವಣೆ ಅಖಾಡ; ಹಾಲಿ ಸಿಎಂ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

ಕಾವೇರಿದ ಉಪಚುನಾವಣೆ ಅಖಾಡ; ಹಾಲಿ ಸಿಎಂ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

by Shwetha
April 2, 2026
0

ರಾಜ್ಯದ ಉಪಚುನಾವಣೆಯ ರಾಜಕೀಯ ಕಣ ಇದೀಗ ತೀವ್ರ ಕಾವೇರಿದ್ದು, ಕಾಂಗ್ರೆಸ್ ಹಾಗೂ BJP ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿವೆ. ಈ ಹಿನ್ನಲೆಯಲ್ಲಿ ಹಾಲಿ...

SSLC & PUC ಪರೀಕ್ಷೆ-2 ಪರಿಷ್ಕೃತ ವೇಳಾಪಟ್ಟಿ ಪ್ರಕಟ

SSLC & PUC ಪರೀಕ್ಷೆ-2 ಪರಿಷ್ಕೃತ ವೇಳಾಪಟ್ಟಿ ಪ್ರಕಟ

by Shwetha
April 2, 2026
0

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ಹಾಗೂ SSLC ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ: ದ್ವಿತೀಯ ಪಿಯುಸಿ...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (02-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 2, 2026
0

ದಿನ ಭವಿಷ್ಯ: 02-04-2026 ಮೇಷ ರಾಶಿ ಇಂದು ನಿಮಗೆ ಅತ್ಯಂತ ಶುಭದಾಯಕವಾದ ದಿನ. ಉದ್ಯೋಗದಲ್ಲಿ ನಿಮ್ಮ ಕಾರ್ಯವೈಖರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ವ್ಯಾಪಾರದಲ್ಲಿ ಹೊಸ ಹೂಡಿಕೆಗಳಿಗೆ ಉತ್ತಮ...

ಉಪಚುನಾವಣೆ ಕಣದಲ್ಲಿ ಅಚ್ಚರಿಯ ಬೆಳವಣಿಗೆ ಯತ್ನಾಳ್ ಪ್ರಚಾರಕ್ಕೆ ಬಂದರೆ ಮುಕ್ತ ಸ್ವಾಗತ ಎಂದ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

ಉಪಚುನಾವಣೆ ಕಣದಲ್ಲಿ ಅಚ್ಚರಿಯ ಬೆಳವಣಿಗೆ ಯತ್ನಾಳ್ ಪ್ರಚಾರಕ್ಕೆ ಬಂದರೆ ಮುಕ್ತ ಸ್ವಾಗತ ಎಂದ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

by Shwetha
April 1, 2026
0

ರಾಜ್ಯ ರಾಜಕಾರಣದಲ್ಲಿ ಹಾಗೂ ವಿಶೇಷವಾಗಿ ಭಾರತೀಯ ಜನತಾ ಪಾರ್ಟಿಯ ಆಂತರಿಕ ವಲಯದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಹೊಸ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram