ಚಾರ್ಜ್ ಗೆ ಇಟ್ಟಿದ್ದ ಮೊಬೈಲ್ ಸ್ಪೋಟಗೊಂಡು 8 ತಿಂಗಳ ಮಗು ಸಾವು…
ಮೊಬೈಲ್ ಪೋನ್ ಚಾರ್ಜಿಂಗ್ ಸಮಯದಲ್ಲಿ ಬ್ಯಾಟರಿ ಸ್ಪೋಟಗೊಂಡು 8 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಕೇವಲ 6 ತಿಂಗಳ ಹಿಂದೆ ಖರೀದಿಸಲಾಗಿದ್ದ ಮೊಬೈಲ್ ಬ್ಯಾಟರಿ ಊದಿಕೊಂಡಿತ್ತು ಎನ್ನಲಾಗಿದೆ ಅದನ್ನ ಸೋಲಾರ್ ಪ್ಯಾನೆಲ್ ಗೆ ಅಳವಡಿಸಿ ಚಾರ್ಜ್ ಇಟ್ಟಾಗ ಮೊಬೈಲ್ ಸ್ಪೋಟಗೊಂಡಿದೆ.
ಮಗುವಿನ ತಾಯಿ ಕುಸುಮ ಕಶ್ಯಪ್ ಕೋಣೆಯಲ್ಲಿ ಇರದ ಸಮಯದಲ್ಲಿ ಮೊಬೈಲ್ ಸ್ಪೋಟಗೊಂಡಿದೆ. ಸ್ಪೋಟದ ಶಬ್ದ ಕೇಳಿದ ನಂತರ ತನ್ನ ಇನ್ನೊಬ್ಬ ಮಗುಳು ನಂದಿನಿ ಸಹಾಯಕ್ಕೆ ಕೂಗಿದಾಗ ಓಡಿಹೋಗಿದ್ದಾರೆ. ಮಗು ಗಂಭೀರವಾಗಿ ಗಾಯಗೊಂಡು ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಆದರೆ ಪೋಷಕರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ತಂದೆ ಸುನೀಲ್ ಕುಮಾರ್ ಕಶ್ಯಪ್, 30, ಕಾರ್ಮಿಕನಾಗಿದ್ದು, ವಿದ್ಯುತ್ ಸಂಪರ್ಕವಿಲ್ಲದೆ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಕುಟುಂಬ ಲೈಟ್ ಮತ್ತು ಮೊಬೈಲ್ ಫೋನ್ ಚಾರ್ಜ್ ಮಾಡಲು ಸೋಲಾರ್ ಪ್ಲೇಟ್ ಬಳಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುನೀಲ್ ಅವರ ಸಹೋದರ ಅಜಯ್ ಕುಮಾರ್ ಮಾತನಾಡಿ “ನಾವು ಸಾಕಷ್ಟು ಬಡವರಾಗಿದ್ದು, ಇನ್ನೂ ಕೀಪ್ಯಾಡ್ ಫೋನ್ಗಳನ್ನು ಬಳಸುತ್ತಿದ್ದೇವೆ. ಅಡಾಪ್ಟರ್ ಬಳಸದೇ ಯುಎಸ್ಬಿ ಕೇಬಲ್ ಬಳಸಿ ಫೋನ್ ಚಾರ್ಜ್ ಮಾಡಲಾಗುತ್ತಿತ್ತು , ಅದಕ್ಕಾಗಿಯೇ ಅದು ಸ್ಫೋಟಗೊಂಡಿದೆ. ಖಾಸಗಿ ಆಸ್ಪತ್ರೆಯಲ್ಲಿ ನೇಹಾಳ ಚಿಕಿತ್ಸೆಗೆ ನನ್ನ ಸಹೋದರನ ಬಳಿ ಹೆಚ್ಚು ಹಣವಿರಲಿಲ್ಲ, ಇಲ್ಲದಿದ್ದರೆ ಆಕೆಯ ಜೀವ ಉಳಿಸಬಹುದಿತ್ತು ಎಂದು ಅಳು ತೋಡಿಕೊಂಡಿದ್ದಾರೆ.








