Telangana: ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಬೆಂಕಿ – 8 ಮಂದಿ ಸಾವು…
ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಸಮೀಪದ ಹೋಟೆಲ್ ಗೆ ವ್ಯಾಪಿಸಿ ಕನಿಷ್ಠ 7 ಜನ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸಿಕಂದರಬಾದ್ ನಲ್ಲಿ ನಡೆದಿದೆ.
ಒಟ್ಟು 7 ಮಂದಿ ಸಾವನ್ನಪ್ಪಿದ್ದು ಅವರಲ್ಲಿ ಕೆಲವರು ಹೊಟೆಲ್ ನ ಕೊಠಡಿಗಳಲ್ಲಿ ಸುಟ್ಟು ಸಾವನ್ನಪ್ಪಿದ್ದಾರೆ, ಇನ್ನೂ ಕೆಲವರು ಬೆಂಕಿತಪ್ಪಿಸಿಕೊಳ್ಳುವಾಗ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿ ವಿ ಆನಂದ್ ಮಧ್ಯರಾತ್ತಿ ತಿಳಿಸಿದ್ದಾರೆ.
Eight killed in #Secunderabad lodge after #MassiveFire at Ruby #ElectricScooter showroom in ground floor spread & engulfed guests; over 20 people were residing; some suffocated because of smoke, others jumped from building to save themselves & suffered injuries @ndtv @ndtvindia pic.twitter.com/CoYYnPI4fR
— Uma Sudhir (@umasudhir) September 13, 2022
ನಂತರ ಸುಟ್ಟ ಗಾಯಗಳಿಂದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ ಎಂದು ಹೈದರಾಬಾದ್‌ನ ಉತ್ತರ ವಲಯದ ಡಿಸಿಪಿ ಚಂದನಾ ದೀಪ್ತಿ ಮಾಹಿತಿ ನೀಡಿದರು.
ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಒಂದರ ನಂತರ ಒಂದು ವಾಹನಗಳು ಸ್ಫೋಟಗೊಂಡಿದೆ ಎಂದು ಶಂಕಿಸಲಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಶೋರೂಮ್ ಅನ್ನು ಆವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
సికింద్రాబాద్ లో ఘోర అగ్నిప్రమాదం: ఎలక్ట్రిక్ బైకుల షోరూమ్ లో పేలుడు; ఏడుగురు దుర్మరణం!!#Secunderabad #FireAccident pic.twitter.com/Shuy7ARz6S
— oneindiatelugu (@oneindiatelugu) September 13, 2022
ಬೆಂಕಿ, ಶೋರೂಮ್ ನ ಮೇಲಿದ್ದ ರೂಬಿ ಹೋಟೆಲ್‌ಗೆ ಹರಡಿದೆ. ಅಲ್ಲಿ ಕನಿಷ್ಠ 25 ಮಂದಿ ತಂಗಿದ್ದರು ಎನ್ನಲಾಗಿದೆ. ಹೆಚ್ಚಿನ ಸಾವು ನೋವುಗಳು ಇಲ್ಲಿ ಸಂಭವಿಸಿವೆ.. ಮಾಹಿತಿ ತಿಳಿದ ಕೂಡಲೇ ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಪೊಲೀಸ್ ರಕ್ಷಣಾ ತಂಡಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ.








