ಉಕ್ರೇನ್ ದಾಳಿಗೆ 800 ಸಾವು, ನೋವು ಸಂಭವಿಸಿವೆ : ಉಕ್ರೇನ್ ರಕ್ಷಣಾ ಸಚಿವಾಲಯ – Saaksha Tv
ಉಕ್ರೇನ್: ಉಕ್ರೇನ್ ಮೇಲೆ ರಷ್ಯಾ ಮಿಲಟಿರಿ ಕಾರ್ಯಾಚರಣೆ ನಡೆಸುತ್ತಿದ್ದು, ನಿನ್ನೆ ರಷ್ಯಾ ಉಕ್ರೇನ್ ರಾಜಧಾನಿ ಕೈವ್ ಮೇಲೆ ದಾಳಿ ಮಾಡಿತ್ತು.
ಈ ಕುರಿತು ಮಾತನಾಡಿದ ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ರಾಜಧಾನಿ ಕೈವ್ ಮೇಲೆ ಅನೇಕ ರಾಕೆಟ್ ಸ್ಟ್ರೈಕ್‌ಗಳಿಂದ ದಾಳಿ ನಡೆದಿದೆ. 1941 ರಲ್ಲಿ ನಾಜಿಯಿಂದ ಕೈವ್ ಮೇಲೆ ಕೊನೆಯ ಬಾರಿಗೆ ದಾಳಿಯಾಗಿತ್ತು. ಅದನ್ನು ಉಕ್ರೇನ್ ಸಮರ್ಥವಾಗಿ ಎದುರಿಸಿ ನಿಂತಿದೆ ಎಂದು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ ನಂತರ ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ತಮ್ಮ ದಾಳಿಗಳನ್ನು ನಡೆಸುತ್ತಿವೆ. ಪುಟಿನ್ ಉಕ್ರೇನ್‌ನ ಎರಡು ಪ್ರತ್ಯೇಕ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಘಟಕಗಳಾಗಿ ಘೋಷಿದ್ದಾರೆ.
ರಷ್ಯಾ ದಾಳಿಗೆ ಉಕ್ರೇನ್ ಪ್ರತಿದಾಳಿ ನಡೆಸಿದ್ದು, ಸುಮಾರು 800 ಸಾವು ನೋವು ಸಂಭವಿಸಿವೆ. ಅಲ್ಲದೆ30 ಕ್ಕೂ ಹೆಚ್ಚು ಟ್ಯಾಂಕ್‌ಗಳು, 7 ವಿಮಾನಗಳು ಮತ್ತು 6 ಹೆಲಿಕಾಪ್ಟರ್‌ಗಳನ್ನು ನಾಶಪಡಿಸಲಾಗಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.
ಹಾಗೇ ರಷ್ಯಾದ ದಾಳಿಗೆ ಗುರುವಾರ ಉಕ್ರೇನ್‌ನಲ್ಲಿ 360 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 137 ಜನರು ಸಾವನ್ನಪ್ಪಿದ್ದಾರೆ.









