ಕನ್ನಡದ ಹಿರಿಯ ಸಂಭಾಷಣೆಕಾರ, ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದ ನಾಗೇಶ್ ಬಾಬ (82) ಅವರು ಇಂದು ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ನಾಗೇಶ್ ಬಾಬ ಅವರು ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಾಗೇಶ್ ಬಾಬ ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

‘ಪ್ರೇಮದ ಪುತ್ರಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದ ನಾಗೇಶ್ ಬಾಬ ಅವರು ಅವರು ಮೂಲತಹ ಮಂಡ್ಯದ ಬೆಳಕವಾಡಿಯವರು.
ಕನ್ನಡ ಸಿನಿಮಾರಂಗಕ್ಕೆ ನಾಗೇಶ್ ಬಾಬ ಅವರ ಕೊಡುಗೆ ಸ್ಮರಣೀಯ.








