ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಕೊರೊನಾಗೆ ಚೆನ್ನೈ ಸೇರಿ ಹಲವು ಪ್ರಮುಖನಗರಗಳು ಹಾಟ್ ಸ್ಪಾಟ್ ಆಗಿ ಮಾರ್ಪಾಡಾಗಿದೆ. ತಮಿಳುನಾಡಿನಲ್ಲಿ ದಿನೇ ದಿನೇ ಕೊರೊನಾ ತನ್ನರೌದ್ರನರ್ತನ ತೋರಿದೆ. ಇದೀಗ ತಮಿಳುನಾಡಿನ ರಾಜಭವನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 84 ಮಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ.
ರಾಜಭವನದಲ್ಲಿನ ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ 84 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಆದ್ರೆ ಸೋಂಕಿತರ ಪೈಕಿ ಯಾರೂ ಸಹ ರಾಜ್ಯಪಾಲರೊಂದಿಗೆ ಸಂಪರ್ಕಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬ್ಬಂದಿಗೆ ಸೋಂಕು ಧೃಢವಾದ ಹಿನ್ನೆಲೆ ರಾಜಭವನವನ್ನು ಸ್ಯಾನಿಟೈಷೇಷನ್ ಮಾಡಿಸುವ ಕಾರ್ಯ ಕೈಗೊಳ್ಳಲಾಗಿದೆ.









