ಕೋವಿಶೀಲ್ಡ್ ಗೆ ಯುರೋಪ್ ನ 9 ದೇಶಗಳಿಂದ ಅನುಮತಿ – ಭಾರತದ ಒತ್ತಡಕ್ಕೆ ಮಣಿದ ಐರೋಪ್ಯ
ಭಾರತ ಸರ್ಕಾರದ ಎಚ್ಚರಿಕೆಯ ನಂತರ, ಯುರೋಪಿಯನ್ ಯೂನಿಯನ್ ಅಂತಿಮವಾಗಿ ಸೀರಮ್ ಇನ್ಸ್ಟಿಟ್ಯೂಟ್ ನ ಕೋವಿಶೀಲ್ಡ್ ಅನ್ನು ಗ್ರೀನ್ ಪಾಸ್ ಯೋಜನೆಯಲ್ಲಿ ಸೇರಿಸಿದೆ. ಯುರೋಪಿನ 9 ದೇಶಗಳು ಭಾರತದಲ್ಲಿ ತಯಾರಿಸಿದ ಕೋವಿಶೀಲ್ಡ್ ಗೆ ಅನುಮತಿ ನೀಡಿದೆ. ಇದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ದೊರಕಿದ ಜಯವಾಗಿದೆ. ಈ ಹಿಂದೆ, ಕೋವಿಶೀಲ್ಡ್ ಕೋವಾಕ್ಸಿನ್ ಅನುಮೋದನೆ ನೀಡದಿದ್ದರೆ ಇಯು ನಾಗರಿಕರಿಗೆ ಭಾರತವನ್ನು ತಲುಪಿದಾಗ ಕ್ವಾರಂಟೈನ್ ಕಡ್ಡಾಯಗೊಳಿಸಲಾಗುವುದು ಎಂದು ಭಾರತ ಸರ್ಕಾರವು ಯುರೋಪಿಯನ್ ಒಕ್ಕೂಟಕ್ಕೆ ಸ್ಪಷ್ಟವಾಗಿ ತಿಳಿಸಿತ್ತು.
ಗ್ರೀನ್ ಪಾಸ್‌ಪೋರ್ಟ್‌ಗೆ ಕೋವಾಕ್ಸಿನ್ ಕೋವಿಶೀಲ್ಡ್ ಅನ್ನು ಪರಿಗಣಿಸದ ಹೊರತು ಇಯು ಲಸಿಕೆ ಪ್ರಮಾಣಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದು ಭಾರತ ಹೇಳಿತ್ತು.

ಯುರೋಪಿಯನ್ ಯೂನಿಯನ್ ತನ್ನ ‘ಗ್ರೀನ್ ಪಾಸ್’ ಯೋಜನೆಯಡಿ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ, ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ತೆಗೆದುಕೊಂಡು ಯುರೋಪಿಗೆ ಪ್ರಯಾಣಿಸಲು ಬಯಸುವ ಭಾರತೀಯರಿಗೆ ಅವಕಾಶ ನೀಡುವುದನ್ನು ಪರಿಗಣಿಸುವಂತೆ ಭಾರತ, ಇಯು ಸದಸ್ಯ ರಾಷ್ಟ್ರಗಳನ್ನು ಕೇಳಿತ್ತು.
ಭಾರತವು ಇಯು ರಾಷ್ಟ್ರಗಳಿಗೆ ಪರಸ್ಪರ ನೀತಿಯನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿತ್ತು ಮತ್ತು ‘ಗ್ರೀನ್ ಪಾಸ್’ ಹೊಂದಿರುವ ಯುರೋಪಿಯನ್ ಪ್ರಜೆಗಳಿಗೆ ದೇಶದಲ್ಲಿ ಕಡ್ಡಾಯ ಕ್ಯಾರೆಂಟೈನ್‌ನಿಂದ ವಿನಾಯಿತಿ ನೀಡುತ್ತದೆ. ಆದರೆ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ಪಡೆದ ಭಾರತೀಯರಿಗೆ ಪ್ರಯಾಣಿಸಲು ಅವಕಾಶ ನೀಡುವ ಕೋರಿಕೆಯನ್ನು ಗಮನದಲ್ಲಿರಿಸಿಕೊಳ್ಳಬೇಕುಎಂದು ಹೇಳಿತ್ತು.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಉತ್ತಮ ಆದಾಯ ನೀಡುವ ಅಂಚೆ ಕಚೇರಿಯ 7 ಯೋಜನೆಗಳು#postofficeschemes https://t.co/Wi9syUu1S5
— Saaksha TV (@SaakshaTv) June 27, 2021
ಸಾಸಿವೆ ಎಣ್ಣೆಯ ಆರೋಗ್ಯ ಪ್ರಯೋಜನಗಳು#Saakshatv #healthtips #Mustardoil https://t.co/Wq9REM7Arz
— Saaksha TV (@SaakshaTv) June 27, 2021
ಕಡ್ಲೆಬೇಳೆ ಮಸಾಲೆ ವಡೆ#Saakshatv #cookingrecipe #masalavade https://t.co/tzZADVNKSM
— Saaksha TV (@SaakshaTv) June 27, 2021
ಮಾವಿನ ಹಣ್ಣಿನ ಸಿಪ್ಪೆಯ ಆರೋಗ್ಯ ಪ್ರಯೋಜನಗಳು#mangopeel #healthbenefits https://t.co/6Gee3KyOpO
— Saaksha TV (@SaakshaTv) June 26, 2021
ಟೋಕಿಯೊದಲ್ಲಿ ಕೊರೋನಾ ಸೋಂಕು ಹೆಚ್ಚಳ – ಒಲಿಂಪಿಕ್ ಕ್ರೀಡಾಕೂಟ ರದ್ದುಗೊಳಿಸುವಂತೆ ಆಗ್ರಹ#OlympicGames https://t.co/97mIY48IEe
— Saaksha TV (@SaakshaTv) June 30, 2021
#Europe #Covishield







