ಉಕ್ರೇನ್ನಲ್ಲಿ ಸಿಲುಕಿದ ಕರ್ನಾಟಕದ 91 ವಿದ್ಯಾರ್ಥಿಗಳು – Saaksha Tv
ಬೆಂಗಳೂರು: ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದ್ದು, ಕರ್ನಾಟಕದ 91 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.
ಉಕ್ರೇನ್ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ 91 ಕರ್ನಾಟಕ ವಿದ್ಯಾರ್ಥಿಗಳು ಉಕ್ರೇನ್ ನಿಂದ ಬರಲು ಕಾಯುತ್ತಿದ್ದಾರೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ಶುಕ್ರವಾರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸುಮಾರು 20,000 ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರು ಉಕ್ರೇನ್ನಲ್ಲಿದ್ದಾರೆ, ಕರ್ನಾಟಕದ ಒಟ್ಟು 91 ವಿದ್ಯಾರ್ಥಿಗಳ ಪೈಕಿ 28 ಬೆಂಗಳೂರಿನವರು, ಮೈಸೂರಿನ 10, ಬಳ್ಳಾರಿ ಮತ್ತು ಹಾಸನದಿಂದ ತಲಾ 5, ಬಾಗಲಕೋಟೆ ಮತ್ತು ಚಾಮರಾಜನಗರದಿಂದ ತಲಾ 4, ಚಿಕ್ಕಬಳ್ಳಾಪುರ, ಚಿಕ್ಕಮಂಗಳೂರು, ದಕ್ಷಿಣ ಕನ್ನಡ ಹಾವೇರಿ, ಕೊಡಗುನಿಂದ ತಲಾ 3 ಮತ್ತು ರಾಯಚೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಡ್ಯ, ಉಡುಪಿ ಮತ್ತು ವಿಜಯಪುರದಿಂದ ತಲಾ 2 ಮತ್ತು ಕೋಲಾರ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ತಲಾ ಒಬ್ಬರು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿದ್ದಾರೆ ಎಂದು ಕೆಎಸ್ಡಿಎಂಎ ವರದಿ ತಿಳಿಸಿದೆ.
ಕರ್ನಾಟಕ ಸರ್ಕಾರವು ಉಕ್ರೇನ್ನಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ಮತ್ತು ಸುಗಮವಾಗಿ ಮನೆಗೆ ಮರಳಲು ಅನುಕೂಲವಾಗುವಂತೆ ಉಚಿತ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಿದೆ. ಆತಂಕಕ್ಕೊಳಗಾದ ನಾಗರಿಕರು ಅಧಿಕಾರಿಗಳನ್ನು 080-22340676 ಗೆ ಸಂಪರ್ಕಿಸಬಹುದು
ಕರ್ನಾಟಕವು ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ.ಮನೋಜ್ ರಂಜನ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು, ವಿದ್ಯಾರ್ಥಿಗಳ ಸುರಕ್ಷಿತ ವಾಪಸಾತಿಗೆ ಸಮನ್ವಯತೆ ಸಾಧಿಸಲು ಕೆಲಸ ಮಾಡುತ್ತದೆ. “ನಮ್ಮ 24/7 ನಿಯಂತ್ರಣ ಕೊಠಡಿಯಲ್ಲಿ ಸಂಗ್ರಹಿಸಿದ ಈ ಎಲ್ಲಾ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕೈವ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಹಂಚಿಕೊಳ್ಳಲಾಗಿದ್ದು, ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಸಿದ್ದಾರೆ.
Russia-Ukraine War: ಭಾರತಕ್ಕೆ ಬಂದಳಿದ ಕನ್ನಡಿಗರನ್ನು ಉಚಿತವಾಗಿ ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲು ನಿರ್ಧಾರ








