ಬೀದರ್: ಜಿಲ್ಲೆಯಲ್ಲಿನ ರೈತರಿಗೂ ವಕ್ಫ್ ಬೋರ್ಡ್ ಕಾಟ ಶುರುವಾಗಿದೆ.
ಜಿಲ್ಲೆಯ ಚಟ್ನಳಿ ತಾಲೂಕಿನ ಒಂದೇ ಗ್ರಾಮದ ಬರೋಬ್ಬರಿ 960 ಎಕರೆ ಜಮೀನುಗಳು ಏಕಾಏಕಿ ವಕ್ಫ್ ಬೋರ್ಡ್ಗೆ (Waqf Board) ಸೇರ್ಪಡೆಯಾಗಿದ್ದು ರೈತರು ಕಂಗಾಲಾಗಿದ್ದಾರೆ.
ಸುಮಾರು 60 ವರ್ಷಗಳಿಂದ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದ ಜಮೀನುಗಳು ವಕ್ಫ್ ಬೋರ್ಡ್ ಗೆ ಸೇರ್ಪಡೆಯಾಗಿವೆ. 2013ರಲ್ಲಿ ಗ್ರಾಮದ 350ಕ್ಕೂ ಅಧಿಕ ಅನ್ನದಾತರ ಹೆಸರಿನಲ್ಲಿದ್ದ ಪಹಣಿಗಳು ಏಕಾಏಕಿ ವಕ್ಫ್ ಬೋರ್ಡ್ಗೆ ಸೇರ್ಪಡೆಯಾಗಿದೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.
ಆಗಿನ ಜಿಲ್ಲಾಧಿಕಾರಿ ಪಿಸಿ ಜಾಫರ್ ರೈತರ ಜಮೀನುಗಳನ್ನು ಏಕಾಏಕಿ ವಕ್ಫ್ ಗೆ ಸೇರಿಸಿದ್ದಾರೆ. ರೈತರ ಜಮೀನುಗಳು ಏಕಾಏಕಿ ವಕ್ಫ್ ಸೇರ್ಪಡೆಯಾಗಿದ್ದರಿಂದ ಸರ್ಕಾರಿ ಸವಲತ್ತುಗಳು ಸಿಗದೇ ಪರದಾಡುತ್ತಿದ್ದಾರೆ. 11 ವರ್ಷಗಳಿಂದ ಸತತವಾಗಿ ವಕ್ಫ್ ಬೋರ್ಡ್ ತೆಗೆಯಿರಿ ಎಂದು ಅನ್ನದಾತರು ಹೋರಾಟ ಮಾಡಿ, ಈಗಾಗಲೇ ಹಲವು ರೈತರು ಬಲಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ (Zameer Ahmed) ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೀವ ಬಿಡುತ್ತೇವೆ ಆದರೆ ನಮ್ಮ ಜಮೀನು ಬಿಡಲ್ಲ. ರೈತರ ಶಾಪ ತಟ್ಟಿದರೆ, ನಿಮ್ಮ ಸರ್ಕಾರ ಖಂಡಿತ ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.