ಎಂಜಿನಿಯರಿಂಗ್ ಫ್ರೆಶರ್ ಗಳಿಗೆ ಗುಡ್ ನ್ಯೂಸ್ : ಪೇಪಾಲ್ ಸೇರಲು ಸುವರ್ಣಾವಕಾಶ
ಬೆಂಗಳೂರು : ಎಂಜಿನಿಯರಿಂಗ್ ಫ್ರಶರ್ ಗಳಿಗೆ ಪೇಪಾಲ್ ಗುಡ್ ನ್ಯೂಸ್ ಕೊಟ್ಟಿದೆ. ಭಾರತದಲ್ಲಿ ತನ್ನ ಅಭಿವೃದ್ಧಿ ಸೆಂಟರ್ ಗಳಿಗೆ 1000 ಎಂಜಿನಿಯರ್ ಗಳನ್ನ ಕಾಲೇಜುಗಳಿಂದ ಕ್ಯಾಂಪಸ್ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿದೆ.
ಈ ಕುರಿತು ಪೇಪಾಲ್ ಇಂಡಿಯಾ ಜಿಎಂ ಗುರು ಭಟ್ ಪ್ರಕಟಣೆ ಹೊರಡಿಸಿದ್ದು, ಪೇಪಾಲ್ ತನ್ನ ಅಭಿವೃದ್ಧಿ ಸೆಂಟರ್ ಗಳಿಗೆ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‍ನಾದ್ಯಂತ 1,000 ಎಂಜಿನಿಯರ್‍ಗಳನ್ನು ನೇಮಕ ಮಾಡಿಕೊಳ್ಳಲಿದೆ.
ಏಪ್ರಿಲ್ 1ರಿಂದ ಭಾರತೀಯ ವ್ಯವಹಾರಗಳಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಮಾರಾಟವನ್ನು ಸಕ್ರಿಯಗೊಳಿಸಲು ಕಂಪನಿಯು ತನ್ನ ಗಮನ ದೇಶದತ್ತ ಕೇಂದ್ರೀಕರಿಸುತ್ತಿದೆ.
ಅಭಿವೃದ್ಧಿ ಸೆಂಟರ್ ಗಳಲ್ಲಿ ಡಿಜಿಟಲ್ ಪಾವತಿ ಮೇಜರ್, ಸಾಫ್ಟ್‍ವೇರ್, ಉತ್ಪನ್ನ ಅಭಿವೃದ್ಧಿ, ಡೇಟಾ ಸೈನ್ಸ್, ರಿಸ್ಕ್ ಅನಾಲಿಟಿಕ್ಸ್ ಮತ್ತು ಬಿಸಿನೆಸ್ ಅನಾಲಿಟಿಕ್ಸ್ ಆರಂಭಿಕ, ಮಧ್ಯಮ ಮಟ್ಟದ ಮತ್ತು ಹಿರಿಯ ರೋಲ್ ಗಳಿಗೆ ಪೇಪಾಲ್ ಇಂಡಿಯಾ ಭಾರತದಾದ್ಯಂತ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಂದ ಕ್ಯಾಂಪಸ್ ನೇಮಕ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪೇಪಾಲ್ ಗೆ ಭಾರತದ ತಂತ್ರಜ್ಞಾನ ಸೆಂಟರ್ ಗಳು ದೊಡ್ಡ ಮಾರುಕಟ್ಟೆಯಾಗಿದ್ದು, ನಿರಂತರವಾಗಿ ಹೊಸತನ ಮತ್ತು ಸ್ಕರ್ವ್ ರೇಖೆಯಲ್ಲಿ ಮುಂದೆ ಉಳಿಯಲು ನಮಗೆ ಭಾರತದ ತಂತ್ರಜ್ಞಾನ ಸೆಂಟರ್ ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದ್ದಾರೆ.