ಇಡೀ ಜಗತ್ತಿಗೆ ಕೊರೊನಾ ಹಬ್ಬಿಸಿ ಕೋವಿಡ್ ಮುಕ್ತವಾಗಿದೆ ಕಪಟಿ ಚೀನಾ..!
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ..
ಅಫ್ಗಾನ್ : ಅಮೆರಿಕಾಗೆ ಎಚ್ಚರಿಕೆ ಕೊಟ್ಟ ತಾಲೀಬಾನಿಗಳು..!
ಆದ್ರೆ ಇಡೀ ವಿಶ್ವಾದ್ಯಂತ ಕೋಟ್ಯಂತರ ಜನರ ಜೀವ ಹೋಗಲು ಕಾರಣವಾದ ಕೊರೊನಾ ತವರು ಚೀನಾದಲ್ಲಿ ಜುಲೈ ನಂತರ ಒಂದೇ ಒಂದು ಕೇಸ್ ವರದಿಯಾಗಿಲ್ವಂತೆ.. ಖುದ್ದು ಚೀನಾದ ಆರೋಗ್ಯ ಪ್ರಾಧಿಕಾರ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದೆ. ಈವರೆಗೂ ಯಾವುದೇ ಸಾವಿನ ಪ್ರಕರಣಗಳು ಕೂಡ ಪತ್ತೆಯಾಗಿಲ್ಲ ಎಂದು ಹೇಳಿಕೊಂಡಿದೆ.








