ಗಂಡು ಮಗುವಿಗೆ ಜನ್ಮ ನೀಡಿದ 12ರ ಬಾಲಕಿ Jodhpur saaksha tv
ಜೋಧ್‍ಪುರ : 12 ವರ್ಷದ ಬಾಲಕಿ ಗಂಡು ಮಗುವಿನ ಜನ್ಮ ನೀಡಿರುವ ಶಾಕಿಂಗ್ ಘಟನೆ ಜೋಧ್ ಪುರದಲ್ಲಿ ನಡೆದಿದೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಇಬಗ್ಗೆ ಪೊಲೀಸ್ ವರಿಷ್ಠಾಧಿಕಾರ ರಾಜುರಾಮ್ ಚೌಧರಿ ಪ್ರತಿಕ್ರಿಯೆ ನೀಡಿದ್ದು, ಒಂಬತ್ತು ತಿಂಗಳ ಹಿಂದೆ ಬಾಲಕಿ ಶಾಲೆಯಿಂದ ಮನೆಗೆ ವಾಪಸ್ ಆಗುವ ಸಂದರ್ಭದಲ್ಲಿ ತನ್ನ ಸಹಪಾಠಿ ಜೊತೆಗೆ ಹಿರಿಯ ( 10ನೇ ತರಗತಿ) ವಿದ್ಯಾರ್ಥಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಗಿ ಹೇಳಿದ್ದಾರೆ.
ಆದ್ರೆ ಬಾಲಕಿಯ ಹೇಳಿಕೆ ಗೊಂದಲಮಯವಾಗಿದೆ ಎಂದಿರುವ ಪೊಲೀಸ್ ಅಧಿಕಾರಿ, ಒಂಭತ್ತು ತಿಂಗಳ ಹಿಂದೆ ಘಟನೆ ಅತ್ಯಾಚಾರ ನಡೆದಿರುವುದಾಗಿ ಬಾಲಕಿ ಹೇಳಿದ್ದಾಳೆ. ಆದ್ರೆ ಆ ಸಮಯದಲ್ಲಿ ಶಾಲೆಗಳು ಮುಚ್ಚಿದ್ದವು ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇತ್ತ ರಾಜಸ್ಥಾನ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷೆ ಸಂಗೀತಾ ಬೇನಿವಾಲ್ ಅವರು ಬಾಲಕಿಯನ್ನು ಭೇಟಿಯಾಗಿದ್ದರು.









