ಸೌತೆಕಾಯಿ ನೀರನ್ನು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು
ಸೌತೆಕಾಯಿಗಳಲ್ಲಿ ಬಿ ಜೀವಸತ್ವಗಳು, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಇರುತ್ತವೆ. ಹಾಗಾಗಿ ಸೌತೆಕಾಯಿಯನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ.
ಅಷ್ಟೇ ಅಲ್ಲ ಸೌತೆಕಾಯಿಯ ನೀರನ್ನು ಕುಡಿಯುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಸೌತೆಕಾಯಿ ನೀರನ್ನು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ:

ಕ್ಯಾನ್ಸರ್ ತಡೆಯುತ್ತದೆ
ಸೌತೆಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಪೋಷಕಾಂಶಗಳಿವೆ. ಇದು ದೇಹವನ್ನು ಕ್ಯಾನ್ಸರ್‌ನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆಹಾರದ ಫೈಬರ್ ಪ್ರಾಸ್ಟೇಟ್ ಕ್ಯಾನ್ಸರ್ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ
ದೇಹದಲ್ಲಿ ಹೆಚ್ಚು ಸೋಡಿಯಂ ಇರುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಸೌತೆಕಾಯಿ ನೀರನ್ನು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಹೊಳೆಯುವ ಚರ್ಮ
ನಮ್ಮ ಚರ್ಮವನ್ನು ಒಳಗಿನಿಂದ ಆರೋಗ್ಯಕರವಾಗಿಸಲು ಸೌತೆಕಾಯಿ ನೀರು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ, ಚರ್ಮವು ಹೊಳೆಯುತ್ತದೆ ಮತ್ತು ದೇಹವು ಒಳಗಿನಿಂದ ಹೈಡ್ರೇಟ್ ಆಗುತ್ತದೆ. ಇದರಿಂದಾಗಿ ಚರ್ಮದ ಒಳಗಿನ ಕೊಳೆಯು ಹೊರಬರುತ್ತದೆ.
ಮೂಳೆಗಳನ್ನು ಬಲಗೊಳಿಸುತ್ತದೆ
ಸೌತೆಕಾಯಿಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ಇದನ್ನು ನಿಮ್ಮ ದೈನಂದಿನ ಸೇವನೆಯ 19 ಪ್ರತಿಶತದಷ್ಟು ತೆಗೆದುಕೊಳ್ಳಬೇಕು. ಈ ನೀರನ್ನು ಕುಡಿಯುವುದರಿಂದ ನಿಮ್ಮ ಮೂಳೆಗಳು ಮತ್ತು ಅಂಗಾಂಶಗಳು ಬಲಗೊಳ್ಳುತ್ತವೆ.
ಮೆದುಳನ್ನು ಬಲಗೊಳಿಸುತ್ತದೆ
ಮೆದುಳಿನ ಕೆಲಸ ಮತ್ತು ಸ್ಮರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸೌತೆಕಾಯಿ ನೀರು ಬಹಳ ಮುಖ್ಯ. ಇದು ನಿಮ್ಮ ಮನಸ್ಸನ್ನು ಸದಾ ಯೌವನಭರಿತವಾಗಿಡುತ್ತದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1428899289531625476?s=19
ಈ ಆಹಾರ ಪದಾರ್ಥಗಳನ್ನು ಸೇವಿಸುವಾಗ ಎಚ್ಚರಿಕೆ ಇರಲಿ#Saakshatv #healthtipspoison https://t.co/ixY1mPbnPj
— Saaksha TV (@SaakshaTv) August 22, 2021
ಬ್ರೆಡ್ ಉಳಿದಿದ್ದರೆ ತಯಾರಿಸಿ ರುಚಿಯಾದ ಚಾಟ್#Saakshatv #cookingrecipe https://t.co/zXFiNh1Lga
— Saaksha TV (@SaakshaTv) August 22, 2021
ಕುಟುಂಬ ಪಿಂಚಣಿಯ ಮಿತಿ ತಿಂಗಳಿಗೆ ರೂ 45,000 ದಿಂದ ರೂ1.25 ಲಕ್ಷಕ್ಕೆ ಏರಿಕೆ#familypension https://t.co/723113WFH1
— Saaksha TV (@SaakshaTv) August 22, 2021
ಉದ್ದಿನ ವಡೆ#Saakshatv #cookingrecipe #uddinavade https://t.co/t6kuH0m3kH
— Saaksha TV (@SaakshaTv) August 21, 2021
#Saakshatv #healthtips #cucumberwater








