ಅಫ್ಗಾನ್ ನಿಂದ ಭಾರತಕ್ಕೆ ಬಂದ 16 ಜನರಲ್ಲಿ ಕೊರೊನಾ ಪಾಸಿಟಿವ್..!
ನವದೆಹಲಿ : ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿ ನರಕವಾಗಿರುವ ಅಫ್ಗಾನಿಸ್ತಾನದಿಂದ ಭಾರತಕ್ಕೆ ಕರೆತರಲಾದ 78 ಮಂದಿ 16 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಅವರಿಗೆ ಕೋವಿಡ್ -19 ಪಾಸಿಟಿವ್ ಪರೀಕ್ಷೆ ನಡೆಸಲಾಗಿದ್ದು, ಸೋಮವಾರ ಮತ್ತು ಮಂಗಳವಾರ ಅಫ್ಗಾನಿಸ್ತಾನದಿಂದ ಆಗಮಿಸಿದವರನ್ನು ದೆಹಲಿಯ ಛಾವ್ಲಾದಲ್ಲಿನ ಐಟಿಬಿಪಿಯ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅಫ್ಗಾನಿಸ್ತಾನದಿಂದ ಆಗಮಿಸುವ ಜನರು ಐಟಿಬಿಪಿ ಕೇಂದ್ರದಲ್ಲಿ ಕಡ್ಡಾಯವಾಗಿ ಕನಿಷ್ಠ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ತಿಳಿಸಿತ್ತು. ಕೋವಿಡ್ ಪಾಸಿಟಿವ್ ಅಥವಾ ರೋಗಲಕ್ಷಣ ಕಂಡುಬಂದ ವ್ಯಕ್ತಿಗಳನ್ನು ದೆಹಲಿಯ ಕೋವಿಡ್ ಕೇರ್ ಸೆಂಟರ್ ಅಥವಾ ದೆಹಲಿಯ ಎನ್‌ಸಿಟಿಯ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗುತ್ತದೆ ಎಂದು ಪ್ರಕಟೆಣೆಯಲ್ಲಿ ತಿಳಿಸಲಾಗಿದೆ.
ಕಾಬೂಲ್‌ನಿಂದ ದುಶಾಂಬೆ ಮೂಲಕ ಆಗಮಿಸಿದ ಎಲ್ಲಾ 78 ಜನರು ಐಜಿಐ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಅವರಲ್ಲಿ, ಸುಮಾರು 10 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು
ನ್ಯೂಯಾರ್ಕ್ ಮೂಲದ ಸಮಾಜ ಸೇವಕ ಮನ್ ದೀಪ್ ಸಿಂಗ್ ಸೊಬ್ಟಿ ಅವರ ಪರವಾಗಿ ದೆಹಲಿಯಲ್ಲಿ ಪುನರ್ವಸತಿ ಕೆಲಸದಲ್ಲಿ ನಿರತವಾಗಿರುವ ಕನ್ವ ಭಲ್ಲಾ ತಿಳಿಸಿದ್ದಾರೆ.
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 37,593 ಕೇಸ್ ಪತ್ತೆ
ಇನ್ನೂ ಅಫ್ಗಾನ್‌ನಿಂದ ಬಂದ ಕೆಲವರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಆದರೆ, ಸಂಖ್ಯೆಯಲ್ಲಿ ಸ್ಪಷ್ಟತೆ ಇಲ್ಲ ಎಂದು ವಿದೇಶಿ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ವಾಯುಪಡೆಯೊಂದಿಗೆ ಸ್ಥಳಾಂತರಿಸುವ ಪ್ರಯತ್ನಗಳನ್ನು ಸಂಘಟಿಸುತ್ತಿರುವ ಭಾರತೀಯ ವಿಶ್ವ ವೇದಿಕೆಯ ಅಧ್ಯಕ್ಷ ಪುನೀತ್ ಸಿಂಗ್ ಚಾಂದೋಕ್ ಹೇಳಿದರು.
ಭಾರತೀಯ ವಾಯುಪಡೆ ತನ್ನ ವಿಶೇಷ ವಿಮಾನಗಳ ಮೂಲಕ ಅಫ್ಘಾನ್ ನಲ್ಲಿರುವ ಭಾರತೀಯರನ್ನು ರಕ್ಷಿಸುತ್ತಿದ್ದು, ಮಂಗಳವಾರ 78 ಮಂದಿ ದೆಹಲಿ ತಲುಪಿದ್ದರು. ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 16 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ 78 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಈವರೆಗೂ 228 ಮಂದಿ ಭಾರತೀಯರು ಸೇರಿದಂತೆ 626 ಜನರನ್ನು ಭಾರತ ಅಫ್ಘಾನ್ ನಿಂದ ರಕ್ಷಣೆ ಮಾಡಲಾಗಿದೆ.








