ದಾವಣಗೆರೆ : ವಿಷಾಹಾರ ಸೇವಿಸಿದ ನೂರಾರು ಮಂದಿ ಅಸ್ವಸ್ಥ
ಸೀಮಂತ ಕಾರ್ಯಮಕ್ರಮದಲ್ಲಿ ವಿಷಾಹಾರ – ನೂರಾರು ಮಂದಿ ಅಸ್ವಸ್ಥ
ದಾವಣಗೆರೆಯ ಜಗಳೂರು ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ಘಟನೆ
ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ
ದಾವಣಗೆರೆ : ಸೀಮಂತ ಕಾರ್ಯಮಕ್ರಮದಲ್ಲಿ ವಿಷಾಹಾರ ಸೇವಿಸಿದ ನೂರಾರು ಮಂದಿ ಅಸ್ವಸ್ಥಗೊಂಡಿರುವ ಆಘಾತಕಾರಿ ಘಟನೆ ದಾವಣಗೆರೆಯ ಜಗಳೂರು ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಣ್ನೆಹಳ್ಳಿಯ ಮನೆಯೊಂದ್ರಲ್ಲಿ ಮಂಗಳವಾರ ಸೀಮಂತ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಮಾರಂಭದಲ್ಲಿ ಬಾಗಿಯಾಗಿದ್ದ ನೂರಾರು ಮಂದಿ ಆಹಾರ ಸೇವನೆ ಮಾಡಿದ್ದರು. ಆದ್ರೆ ಸ್ವಲ್ಪ ಹೊತ್ತಲ್ಲೇ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ವಿಷಾಹಾರ ಸೇವನೆಯಿಂದಲೇ ಈ ಘಟನೆ ಜರುಗಿದ್ದಾಗಿ ತಿಳಿದುಬಂದಿದೆ.. ಅಸ್ವಸ್ಥರನ್ನ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಗ್ತಿದೆ.
ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ಜಲಸಮಾಧಿ , ಮೂವರು ಎಸ್ಕೇಪ್








