ಮುಂಬೈ ಮೇಯರ್ ಸ್ಥಾನಕ್ಕೆ ರಿಯಲ್ ಹೀರೋ ಸೋನು ಸೂದ್, ರಿತೇಶ್ , ಮಿಲಿಂದ್ ಹೆಸರು ಶಿಫಾರಸು ಮಾಡಿದ ಕಾಂಗ್ರೆಸ್..!
ಭಾರತೀಯರು , ಬಡವರ ಪಾಲಿಗೆ ರಿಯಲ್ ಹೀರೋ ಆಗಿರುವ ಸೋನು ಮಾನವೀಯ ಕೆಲಸಗಳ ಬಗ್ಗೆ ಎಷ್ಟು ಗುಣಗಾನ ಮಾಡಿದರೂ ಸಾಕಾಗೋದಿಲ್ಲ.. ಎಲ್ಲೆ ಮೀರಿ ಸಹಾಯ ಬೇಡುವವರಿಗೆ ಸಹಾಯ ಮಾಡುತ್ತಾರೆ ಸೋನು.. ಇದೀಗ ಮುಂಬೈ ಮುಂದಿನ ಮೇಯರ್ ಕ್ಯಾಂಡಿಡೇಟ್ ಗೆ ಸೋನು ಸೂದ್ ಪರ್ಫೆಕ್ಟ್ ಎನ್ನುವ ಮಾತು ಕಾಂಗ್ರೆಸ್ ಪಾಳಯದಲ್ಲಿ ಜೋರಾಗಿಯೇ ಸೌಂಡ್ ಮಾಡ್ತಿದೆ.
ಹೌದು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಎಲ್ಲಾ 227 ಸ್ಥಾನಗಳಲ್ಲೂ ಸ್ಪರ್ಧಿಸಲು ಕಾಂಗ್ರೆಸ್ ನಿರ್ಧರಿಸಿದೆ. ಮುಂಬೈ ಮೇಯರ್ ಹುದ್ದೆಗೆ ಮೂವರು ಖ್ಯಾತ ನಟರ ಹೆಸರನ್ನು ಕಾಂಗ್ರೆಸ್ ಶಿಫಾರಸು ಮಾಡುವ ಮೂಲಕ ಗಮನ ಸೆಳೆದಿದೆ. ಮುಂಬೈ ಕಾಂಗ್ರೆಸ್ ಘಟಕದ ಕಾರ್ಯತಂತ್ರ ಸಮಿತಿಯು ಬಿಎಂಸಿ ಚುನಾವಣೆಗೆ ವರದಿಯನ್ನು ಸಿದ್ಧಪಡಿಸಿದ್ದು ಸೋಮವಾರ ಉನ್ನತ ನಾಯಕರ ಜೊತೆ ಚರ್ಚೆಗೆ ಕಳುಹಿಸಿದೆ.
ಡ್ರಗ್ಸ್ ಸೇವನೆ ಖಚಿತವಾಗ್ತಿದ್ದಂತೆ, ಹಾಸ್ಪೆಟಲ್ ನಲ್ಲಿ ಅಡ್ಮಿಟ್ ಆದ ಸಂಜನಾ ಗಲ್ರಾನಿ..!
ಕಾರ್ಯತಂತ್ರ ಸಮಿತಿಯು 25 ಪುಟಗಳ ಕಾರ್ಯತಂತ್ರ ರಚಿಸಿದ್ದು, ಬಾಲಿವುಡ್ ನಟರಾದ ಸೋನು ಸೂದ್, ರಿತೇಶ್ ದೇಶಮುಖ್ ಮತ್ತು ಮಾಡೆಲ್ ಮಿಲಿಂದ್ ಸೋಮನ್ ಹೆಸರನ್ನು ಮುಂಬೈ ಮೇಯರ್ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳಾಗಿ ಶಿಫಾರಸು ಮಾಡಿದೆ. ತನ್ನ ಕಮಿಟಿಯೂ ತನ್ನ ವರದಿಯಲ್ಲಿ, ಮೇಯರ್ ಅಭ್ಯರ್ಥಿಗಳು ಪ್ರಮುಖವಾಗಿ ಯುವಕರನ್ನು ಆಕರ್ಷಣೆ ಮಾಡಬೇಕು ಮತ್ತು ಸಾರ್ವಜನಿಕರು ತನ್ನ ಕಡೆ ಸೆಳೆಯುವಂತಿರಬೇಕು ಎಂದು ಹೇಳಿದೆ.
ಮುಂಬೈ ಕಾಂಗ್ರೆಸ್ ಅಧ್ಯಕ್ಷ ಭಾಯ್ ಜಗ್ತಾಪ್ ಪಕ್ಷದ ಹಿರಿಯ ನಾಯಕರೊಂದಿಗೆ ದಾಖಲೆ ಕುರಿತು ಚರ್ಚಿಸಲಿದ್ದಾರೆ ಎಂದು ಮುಂಬೈ ಕಾಂಗ್ರೆಸ್ ಕಾರ್ಯದರ್ಶಿ ಗಣೇಶ್ ಯಾದವ್ ಹೇಳಿದ್ದಾರೆ. ಚುನಾವಣೆಗೂ ಮೊದಲು ಮೇಯರ್ ಅಭ್ಯರ್ಥಿಗಳನ್ನು ಘೋಷಿಸಬೇಕು ಮತ್ತು ಯಾವುದೇ ರಾಜಕೀಯ ಪಕ್ಷಕ್ಕೆ ಸೇರದ ಅಭ್ಯರ್ಥಿಗಳನ್ನು ಹುದ್ದೆಗೆ ಪರಿಗಣಿಸಬೇಕೆಂದು ವರದಿಯಲ್ಲಿ ಸೂಚಿಸಿದೆ.
ಬಿಎಂಸಿ ಚುನಾವಣೆ 2022ರಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮುಂಬೈ ಮುನ್ಸಿಪಾಲ್ ಕಾರ್ಪೊರೇಶನ್ ಅನ್ನು ಏಷ್ಯಾದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆ ಎಂದು ಪರಿಗಣಿಸಲಾಗಿದ್ದು, ವಾರ್ಷಿಕ ರೂ. 37,000 ಕೋಟಿ ರೂ.ಗಳ ಬಜೆಟ್ ಹೊಂದಿದೆ.
“ವಿಕ್ರಾಂತ್ ರೋಣ”ನ ನಂತರ ಕಾಲಿವುಡ್ ನಲ್ಲಿ ಕಿಚ್ಚ..!








