ಭಾರತ ಪ್ರವೇಶಿಸಬೇಕಾದ್ರೆ ಅಘ್ಘಾನ್ ಪ್ರಜೆಗಳ ಬಳಿ ಇ-ವೀಸಾ ಇರಲೇ ಬೇಕು..!
ನವದೆಹಲಿ : ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಇದೀಗ ಈ ನರಕದಿಂದ ಜನ ಹೇಗಾದ್ರೂ ಪಾರಾಗಲೇ ಬೇಕು ಅನ್ನೋ ತವಕದಲ್ಲಿದಲ್ಲಿದ್ದಾರೆ.. ನರರಾಕ್ಷಸರಿಂದ ತಪ್ಪಿಸಿಕೊಂಡ್ರೆ ಸಾಕು ಅಂತ ದೇಶ ಬಿಡ್ತಾಯಿದ್ದಾರೆ.. ಸೆಲೆಬ್ರಿಟಿಗಳು ಜನಪ್ರತಿನಿಧಿಗಳು ಈಗಾಗಲೇ ದೇಶ ಬಿಟ್ಟು ಬೇರೆ ಬೇರೆ ದೇಶಗಳಿಗೆ ಓಡಿಹೋಗಿದ್ದಾರೆ.. ದೇಶದ ಅಧ್ಯಕ್ಷ ಅಶ್ರಫ್ ಘನಿ ಜನರನ್ನ ಸಂಕಷ್ಟದ ಸಮಯದಲ್ಲಿ ಬಿಟ್ಟು ಪಲಾಯನ ಮಾಡಿದ್ದಾನೆ..
‘ಸ್ಮಶಾಣ’ ಬಿಟ್ಟು ಹೋಗದಂತೆ ಜನರಿಗೆ ‘ನರರಾಕ್ಷಸ’ರ ಎಚ್ಚರಿಕೆ..!
ಅನೇಕರು ಭಾರತಕ್ಕೂ ಬಂದಿದ್ದಾರೆ, ಪ್ರವೇಶ ಮಾಡುವ ಪ್ರಯತ್ನದಲ್ಲಿದ್ದಾರೆ. ಆದ್ರೆ ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಅಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಲ್ಲಾ ಅಘ್ಘಾನ್ ಪ್ರಜೆಗಳು ಇ-ವೀಸಾದೊಂದಿಗೆ ಮಾತ್ರ ಭಾರತಕ್ಕೆ ಪ್ರಯಾಣಿಸಬೇಕು ಎಂದು ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ. ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ನೆಲೆಸಿರುವ ಅಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತು ‘ಇ-ತುರ್ತು ಎಕ್ಸ್-ಮಿಸಲೇನಿಯಸ್ ವೀಸಾ’ವನ್ನು ಪರಿಚಯಿಸುವ ಮೂಲಕ ವೀಸಾ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಿರುವುದರಿಂದ, ಇನ್ನು ಮುಂದೆ ಎಲ್ಲಾ ಅಘ್ಘಾನ್ ಪ್ರಜೆಗಳು ಇ-ವೀಸಾದೊಂದಿಗೆ ಮಾತ್ರ ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡಲು ಗೃಹ ಸಚಿವಾಲಯ ತಯಾರಿ ನಡೆಸಿದೆ.
ಕೆಲವು ಅಘ್ಘಾನ್ ಪ್ರಜೆಗಳ ಪಾಸ್ಪೋರ್ಟ್ ಗಳು ಕಳೆದುಹೋಗಿವೆ ಎಂಬ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಭಾರತದಲ್ಲಿಲ್ಲದ ಎಲ್ಲಾ ಅಘ್ಘಾನ್ ಪ್ರಜೆಗಳಿಗೆ ಈ ಹಿಂದೆ ನೀಡಲಾಗಿದ್ದ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನ್ಯಗೊಳಿಸಲಾಗಿದೆ. ಇನ್ನು ಮುಂದೆ ಭಾರತಕ್ಕೆ ಪ್ರಯಾಣಿಸಲು ಬಯಸುವ ಆಫ್ಘನ್ ಪ್ರಜೆಗಳು www.indianvisaonline.gov.in ಮೂಲಕ ಇ-ವೀಸಾಗೆ ಅರ್ಜಿ ಸಲ್ಲಿಸಬಹುದಾಗಿದೆ.








