ಭಜರಂಗಿ 2 ರಿಲೀಸ್ ದಿನಾಂಕ ಘೋಷಣೆ..? ಯಾವಾಗ ಗೊತ್ತಾ..?
ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಭಜರಂಗಿ 2 ಸಿನಿಮಾ ಟೀಸರ್ ಹಾಗೂ ಪೋಸ್ಟರ್ ಗಳಿಂದ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ನಡುವೆ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯ್ತಿದ್ದು, ಅವರೆಲ್ಲರಿಗೂ ಇದೀಗ ಗುಡ್ ನ್ಯೂಸ್ ಸಿಕ್ಕಿದೆ.. ಸಿನಿಮಾದ ರಿಲೀಸ್ ಡೆಟ್ ಕೊನೆಗೂ ರಿವೀಲ್ ಆಗಿದೆ..
ಭಜರಂಗಿ 2 ಸಿನಿಮಾವು ಸೆಪ್ಟೆಂಬರ್ 10 ರಂದು ಅಂದ್ರೆ ಗಣೇಶ ಚತುರ್ಥಿಗೆ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದ್ದು, ಸಿನಿಮಾವನ್ನು ಎಲ್ಲರೂ ಚಿತ್ರಮಂದಿರಗಳಲ್ಲಿಯೇ ನೋಡಿ ಹರಿಸಿರಿ ಎಂದು ಮನವಿ ಮಾಡಿದ್ದಾರೆ.








