ಪ್ಯಾರಾಲಿಂಪಿಕ್ಸ್ ನ ಟೇಬಲ್ ಟೆನ್ನಿಸ್ : ಬೆಳ್ಳಿ ಗೆದ್ದ ಭಾವಿನಾ
ಟೋಕಿಯೋ : ಪ್ಯಾರಾಲಿಂಪಿಕ್ಸ್ ನ ಟೇಬಲ್ ಟೆನ್ನಿಸ್ ನಲ್ಲಿ ಭಾರತದ ಪ್ಯಾರಾ ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಚೀನಾದ ಝೋ ಯಿಂಗ್ ವಿರುದ್ಧದ ಫೈನಲ್ ಪಂದ್ಯದಲ್ಲಿ 0-3 ಅಂತರದಿಂದ ಸೋಲು ಕಾಣುವ ಮೂಲಕ ಭಾವಿನಾ ಚಿನ್ನ ಗೆಲ್ಲುವಲ್ಲಿ ಎಡವಿದರು.
ಅಂದಹಾಗೆ ಈವರೆಗೂ ಪ್ಯಾರಾಲಿಂಪಿಕ್ಸ್ ನ ಟೇಬಲ್ ಟೆನ್ನಿಸ್ ನಲ್ಲಿ ಭಾರತದ ಪರ ಯಾರು ಫೈನಲ್ ಪ್ರವೇಶಿಸಲಿರಲಿಲ್ಲ.
ಆದ್ರೆ ಭಾವಿನಾ ಪಟೇಲ್ ಅವರು ಇದೇ ಮೊದಲ ಬಾರಿಗೆ ಫೈನಲ್ ಗೆ ಲಗ್ಗೆ ಇಟ್ಟು, ಬೆಳ್ಳಿಗೆ ಮುತ್ತಿಟ್ಟಿದ್ದಾರೆ. ಆ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇನ್ನು ಫೈನಲ್ ಪಂದ್ಯ ಭಾರಿ ರೋಚಕತೆಯಿಂದ ಕೂಡಿತ್ತು. ಫೈನಲ್ ನ ಮೊದಲ ಸೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಚೀನಾ 11-7 ಪಾಯಿಂಟ್ ನಿಂದ ಮುನ್ನಡೆ ಸಾಧಿಸಿತು.
ಐಸಿಎಫ್‌ಆರ್‌ಇ – ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಎರಡನೇ ಸೆಟ್ ನಲ್ಲೂ ಝೋ ಯಿಂಗ್ 2-0 ಅಂತರದಿಂದ ಗೆಲುವು ಸಾಧಿಸಿದರು. ಅಂತಿಮವಾಗಿ ಚೀನಾದ ಝೋ ಯಿಂಗ್ ಫೈನಲ್ ಪಂದ್ಯ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡರೇ, ಭಾವಿನಾ ಬೆಳ್ಳಿ ಕೈವಶ ಮಾಡಿಕೊಂಡರು.








