ಖ್ಯಾತ ಬಂಗಾಳಿ ಲೇಖಕ ಬುದ್ಧದೇವ್ ಗುಹಾ ವಿಧಿವಶ
ಖ್ಯಾತ ಬಂಗಾಳಿ ಲೇಖಕ ಬುದ್ಧದೇವ್ ಗುಹಾ ಅವರು ಕೋಲ್ಕತ್ತಾದಲ್ಲಿ ವಿಧಿವಶರಾದರು. ವೃತ್ತಿಪರ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಗುಹಾ, ಮಕ್ಕಳ ಪಾತ್ರಗಳನ್ನು ಸೃಷ್ಟಿಸಿದ ಅತ್ಯಂತ ಜನಪ್ರಿಯ ಬರಹಗಾರರಲ್ಲಿ ಒಬ್ಬರಾಗಿದ್ದರು. ಬುದ್ಧದೇವ್ ಗುಹಾ (85) ಅವರು ಭಾನುವಾರ ತಡರಾತ್ರಿ ಕೋಲ್ಕತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ವರ್ಷದ ಆರಂಭದಲ್ಲಿ ಏಪ್ರಿಲ್ನಲ್ಲಿ, ಗುಹಾ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾಗಿತ್ತು.
ಒಂದು ತಿಂಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು.. ಅದ್ರೆ ಇತ್ತೀಚೆಗೆ ಶ್ವಾಸಕೋಶ ಮತ್ತು ಮೂತ್ರ ಪಿಂಡದಲ್ಲಿ ಸಮಸ್ಯೆಯಿಂದ ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗ್ತಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ 11.30 ರ ಸುಮಾರಿಗೆ ನಿಧನರಾಗಿದ್ದಾರೆ.
ಗುಹಾ ಅವರ ಕಾದಂಬರಿಗಳು ಮತ್ತು ಸಣ್ಣ ಕಥೆಗಳಲ್ಲಿ ಪ್ರಕೃತಿ ಮತ್ತು ಅರಣ್ಯವು ಮರುಕಳಿಸುವುದನ್ನ ಹೆಚ್ಚು ತೋರಿಸಲಾಗ್ತಿತ್ತು. ಬಂಗಾಳಿ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಲ್ಪಟ್ಟ ಅವರ ಮಧುಕೋರಿ ಕಾದಂಬರಿಗಾಗಿ ಅವರನ್ನು ಹೆಚ್ಚು ಜನರು ನೆನಪಿಸಿಕೊಳ್ತಾರೆ.
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 42,909 ಕೇಸ್ ಪತ್ತೆ








