1. ತಾಯಿ ತನ್ನ ಮಗುವಿಗೆ ಜನ್ಮ ನೀಡುವಾಗ ಆಗುವ ನೋವು ಅದರ ಮುಂಚದೆ ಬೇರೆ ಯಾವುದೂ ನೋವು ಎಂದೆನಿಸುವುದೇ ಇಲ್ಲ.. ರಿಪೋರ್ಟ್ ಗಳ ಪ್ರಕಾರ ಒಬ್ಬ ತಾಯಿ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಆಗುವ ನೋವು ಒಂದೇ ಬಾರಿ ಒಟ್ಟಿಗೆ 20 ಮೂಳೆಗಳನ್ನ ಮುರಿದಷ್ಟರ ಮಟ್ಟಿಗಿರುತ್ತೆ ಎಂದು ಹೇಳಲಾಗಿದೆ. ಅಂದ್ರೆ ಅದನ್ನ ಊಹೆ ಸಹ ಮಾಡಿಕೊಳ್ಲಲು ಸಾಧ್ಯವಿಲ್ಲ. ಹೊಟ್ಟೆಯಲ್ಲಿ ಮಗುವನ್ನ 9 ತಿಂಗಳ ಕಾಲ ಹೊತ್ತು ಹೆತ್ತು ಜೋಪಾನವಾಗಿ ನೋಡಿಕೊಳ್ಳುವ ತಾಯಿ ಮಗುವಿಗೆ ಜನ್ಮ ನೀಡುವಾಗ ಯಾವ ಮಟ್ಟಿಗೆ ನೋವು ಸಹಿಸಿಕೊಳ್ಳಬೇಕು.. ಅದಕ್ಕೆ ತಾಯಿಗೆ ಎಲ್ಲಾ ನೋವನ್ನ ಸಹಿಸಿಕೊಳ್ಳುವ ಶಕ್ತಿ ಇದೆ ಎನ್ನುವುದು. ತಾಯಿ ನಿಜವಾದ ದೇವರು.
2. ಹೊಟ್ಟೆ ಉರಿ – ಹೌದು ಹೊಟ್ಟೆ ಕಿಚ್ಚಿನಿಂದ ಅಥವಾ ಯಾರೋ ನಮಗೆ ಬೇಕಾದವರೂ ನವiಗೆ ನೋವಾಗುವ ರೀತಿ ನಡೆದುಕೊಂಡರೆ ನಮಗಿಂತ ಇತರರ ಜೊತೆಗೆ ಚೆನ್ನಾಗಿ ಇದ್ದರೆ, ಅಥವ ನಾವಂದುಕೊಂಡಿದು ನಮಗೆ ಸಿಗದೇ ಬೇರೆಯವರಿಗೆ ಸಿಕ್ಕರೆ, ಮನಸ್ಸಿನಲ್ಲಿ ಅಶಾಂತಿ ಹೊಟ್ಟೆ ಕಿಚ್ಚು ನೆಮ್ಮದಿ ಹಾಳು ಮಾಡುತ್ತೆ… ಇದು ನಿಜಕ್ಕೂ ಜೀವನದಲ್ಲಿ ಮಾನಸಿಕವಾಗಿ ಪ್ರತಿಯೊಬ್ಬರೂ ಸಹ ಅನುಭವಿಸುವ ತುಂಬಾ ದೊಡ್ಡ ನೋವು ಅನ್ನಬಹುದು.
3. ಬೆಂಕಿ – ಅಪ್ಪಿ ತಪ್ಪಿ ಚಿಕ್ಕ ಬೆಂಕಿಯ ಕಿಡಿ ತಾಗಿದರೆ ಎಷ್ಟು ಉರಿಯುತ್ತೆ. ಅದೇ ಅನೇಕರು ಬೆಂಕಿಯಲ್ಲೇ ಸಜೀವ ದಹನವಾಗಿದ್ರೆ, ಇನ್ನೂ ಹಲವರು ಬದುಕುಳಿದಿದ್ದಾರೆ. ಇನ್ನೂ ಹಲವು ಮಂದಿ ಅರೆಬರೆ ಬೆಂದ ಪ್ರಕರಣಗಳಿವೆ. ಒಂದು ಬೆಂಕಿಯಿಂದ ಉರಿಯುವ ನೋವು ತುಂಬಾ ತುಂಬಾ ತುಂಬಾ ತೀವ್ರವಾಗಿರುತ್ತದೆ. ಮತ್ತೊಂದು ಬೆಂಕಿ ಅಥವಾ ಆಸಿಡ್ ದಾಳಿಯ ನಂತರ ನಮ್ಮ ಬದುಕಿನ ಉದ್ದಕ್ಕೂ ಹಳೆಯ ನೆನಪು , ಗಾಯಗಳ ಕಲೆಗಳು ಮಾನಸಿಕವಾಗಿ ಕುಂದಿಸುತ್ತಾ ತೀರ ನೋವು ನೀಡುತ್ತೆ..