ಸರಿಯಾದ ನಿದ್ದೆ ಇಲ್ಲದೇ ಹೋದ್ರೆ ಮನುಷ್ಯರು ಅನುಭವಿಸುವ ತೊಂದರೆಗಳಿವು..! ಯಾವ್ಯಾವ ವಯಸ್ಸಿವರು ಎಷ್ಟು ಹೊತ್ತು ನಿದ್ದೆ ಮಾಡಬೇಕು..?
ನಿದ್ದೆ ಮನುಷ್ಯನ ಜೀವನಕ್ಕೆ ತುಂಬಾನೆ ಮುಖ್ಯ.. ಹಾಗೆ ಅದು ಅತಿಯೂ ಆಗಬಾರದು. ಕಡಿಮೆ ಪ್ರಮಾಣದಲ್ಲೂ ಆಗಬಾರದು.. ಒಂದು ದಿನ ನಿದ್ದೆ ಸರಿಯಾಗಿ ಆಗಲಿಲ್ಲ ಅಂದ್ರೆ ಅವತ್ತು ಇಡೀ ದಿನ ಏನೋ ಒಂದು ರೀತಿ ಇರಿಟೇಷನ್ , ಹೆಚ್ಚು ಕೋಪ , ಆಯಾಸ , ಆಕಲಿಕೆ ಬರುವುದಕ್ಕೆ ಶುರುವಾಗುತ್ತೆ.. ಅದದೇ ರೀತಿ ನಿದ್ದೆ ಹೆಚ್ಚಾದ್ರೂ ಆಲಸ್ಯ ,ಸೋಂಬೇರಿತನವಿರುತ್ತೆ.. ನಿದ್ದೆ ಮಂಪರು ಹಾಗೆ ಇರುತ್ತೆ.. ಏನೂ ಕೆಲಸ ಮಾಡುವುದಕ್ಕೂ ಮನಸ್ಸು ಬರುವುದಿಲ್ಲ.. ಆದ್ರೆ ದೈನಂದಿನ ತೊಡಕುಗಳ ಹೊರತಾಗಿ ನಿದ್ದೆ ಸರಿಯಾಗಿ ಮಾಡದೇ ಇದ್ದಲ್ಲಿ ಅನೇಕ ದೈಹಿತ ಹಾಗೂ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ.
ನಿದ್ದೆ – ಭ್ರಮೆ
4 ದಿನಗಳು ನಿದ್ದೆಯಿಲ್ಲದೇ ಇದ್ರೆ ಮನಷ್ಯರು ಭ್ರಮೆಯಲ್ಲಿ ಬದುಕಲು ಆರಂಭಿಸುತ್ತಾರಂತೆ.
ನಿದ್ದೆಗೆಟ್ಟರೆ ತೂಕ ಹೆಚ್ಚಾಗುತ್ತದೆ
1 ದಿನ ರಾತ್ರಿಯಿಡೀ ನಿದ್ದೆಗೆಟ್ಟರೆ, ನಿದ್ರೆ ಮಾಡದೇ ಎಚ್ಚರವಾಗಿಯೇ ಇದ್ದರೆ ನಿಮ್ಮ ದೇಹದಲ್ಲಿ 161 ಕ್ಯಾಲೋರೀಸ್ ಫ್ಯಾಟ್ ಹೆಚ್ಚಾಗುತ್ತೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.
ಅತಿಯಾದ ಚಿಂತನೆಯಿಂದ ಮಹಿಳೆಯರು ನಿದ್ದೆ ಕೆಡುವುದು
ಸಾಮಾನ್ಯವಾಗಿ 50 % ರಷ್ಟು ಮಹಿಳೆಯರು ಅತಿಯಾದ ಚಿಂತನೆಯಿಂದ ಕ್ರಮವಾಗಿ 2 ಗಂಟೆಗಳ ನಿದ್ದೆಗೆಡುತ್ತಾರೆ ಎನ್ನಲಾಗುತ್ತೆ.
ನೀವು ಚೆನ್ನಾಗಿ ತಿನ್ನುತ್ತಾ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೂ ಕೂಡ ಸರಿಯಾಗಿ ನಿದ್ದೆ ಮಾಡದೇ ಹೋದಲ್ಲಲಿ ಅದರ ಫಲವೂ ಕೂಡ ವ್ಯರ್ಥವಾಗುತ್ತದೆ. ಪ್ರತಿ ರಾತ್ರಿ ಕನಿಷ್ಠ ಏಳು ಗಂಟೆಗಳ ನಿದ್ರೆ ಮಾಡದಿದ್ದರೆ ಆರೋಗ್ಯವು ದುರ್ಬಲಗೊಳ್ಳುತ್ತದೆ. ಮೊದಲನೆಯದಾಗಿ ನಾವು ನಿದ್ರೆಗೆ ಆದ್ಯತೆ ನೀಡಬೇಕು ಎಂದು ಹೇಳುತ್ತಾರೆ ತಜ್ಞ ವೈದ್ಯರಾದ ಡಾ. ವಾಲಿಯಾ. ಅಲ್ಲದೇ ಸರಿಯಾದ ಆಹಾರ , ವ್ಯಾಯಾಮದ ಜೊತೆಗೆ ಅಗತ್ಯ ಪ್ರಮಾಣದ ನಿದ್ರೆ ಮನುಷ್ಯನ ಾರೋಗ್ಯಕ್ಕೆ ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸರಿಯಾದ ಪ್ರಮಾಣದಲ್ಲಿ ನಿದ್ರೆಯಾದ್ರೆ ಮರುದಿನ ಆರೋಗ್ಯವು ಸಹ ಉತ್ತಮವಾಗಿರುತ್ತೆ.
ಹಿರಿಯ ವಯಸ್ಕರು ( 65+) : 7 ರಿಂದ 8 ಗಂಟೆಗಳು
ವಯಸ್ಕರು (26 ರಿಂದ 64) : 7 ರಿಂದ 9 ಗಂಟೆಗಳು
ಯುವ ವಯಸ್ಕರು (18 ರಿಂದ 25) : 7 ರಿಂದ 9 ಗಂಟೆಗಳು
ಹದಿಹರೆಯದವರು (14 ರಿಂದ 17 ) : 8 ರಿಂದ 10 ಗಂಟೆಗಳು
ಶಾಲಾ ವಯಸ್ಸಿನ ಮಕ್ಕಳು (6 ರಿಂದ 13 ) : 9 ರಿಂದ 11 ಗಂಟೆಗಳು
ಪ್ರಿಸ್ಕೂಲ್ ಮಕ್ಕಳು (3 ರಿಂದ 5 ) : 10 ರಿಂದ 13 ಗಂಟೆಗಳು
ಅಂಬೆಗಾಲಿಡುವ ಮಕ್ಕಳು (1 ರಿಂದ 2) : 11 ರಿಂದ 14 ಗಂಟೆಗಳು
ಶಿಶುಗಳು (4 ರಿಂದ 11 ತಿಂಗಳುಗಳು) : 12 ರಿಂದ 15 ಗಂಟೆಗಳು
ನವಜಾತ ಶಿಶುಗಳು ( 0 ರಿಂದ 3 ತಿಂಗಳುಗಳು) : 14 ರಿಂದ 17 ಗಂಟೆಗಳು








