ಅವನಿಗೆ ನಾಲಿಗೆಗೂ ಬ್ರೈನ್ ಗೂ ಲಿಂಕ್ ಇಲ್ಲ : ಈಶ್ವರಪ್ಪಗೆ ಸಿದ್ದರಾಮಯ್ಯ ಟಾಂಗ್ siddaramaiah saaksha tv
ಬೆಂಗಳೂರು : ಕೆ.ಎಸ್.ಈಶ್ವರಪ್ಪನ ಆರೋಪದ ಬಗ್ಗೆ ನಾನು ಮಾತನಾಡಲ್ಲ. ಅವನಿಗೆ ನಾಲಿಗೆಗೂ ಬ್ರೈನ್ ಗೂ ಲಿಂಕ್ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ನ ಫೀಕ್ ಕಿತ್ತಾಕಿದ್ದೇನೆ ಎಂಬ ಹೇಳಿಕೆಗೆ ಟಾಂಗ್ ನೀಡಿದರು.
ಕುಮಾರಸ್ವಾಮಿಯವರು ಕಾಂಗ್ರೆಸ್ ನ ಫೀಜ್ ಕಿತ್ತು ಹಾಕಿದ್ದೇನೆ ಅಂದಿದಾರೆ. ಆದ್ರೆ ವಿಧಾನಸಭೆ ಚುನಾವಣೆ ಬರಲಿ ಯಾರು – ಯಾರ ಫೀಜ್ ಕಿತ್ತು ಹಾಕ್ತಾರೆ ಗೊತ್ತಾಗುತ್ತೆ. ಜನ ಯಾರ ಫೀಜ್ ಕೀಳ್ತಾರೆ ಎಲ್ಲ ಗೊತ್ತಾಗುತ್ತೆ ಎಂದು ಟಾಂಗ್ ನೀಡಿದರು.
ಇದೇ ವೇಳೆ ಜಿ ಟಿ ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿ, ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನ್ನ ಹತ್ತಿರ ಮಾತನಾಡಿರುವುದು ಸತ್ಯ. ಅವರಿಗೆ ಹಾಗೂ ಅವರ ಮಗನಿಗೆ ಇಬ್ಬರಿಗೂ ಟಿಕೆಟ್ ಕೇಳಿರುವುದು ಹೌದು.
ಆದರೆ ಯಾವ ಕ್ಷೇತ್ರ ಅಂತ ಹೇಳಿಲ್ಲ. ನಾನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹತ್ತಿರ ಮಾತನಾಡುತ್ತೇನೆ ಅಂತ ಹೇಳಿದ್ದೇನೆ.
ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಜೆಡಿಎಸ್ ಬಗ್ಗೆ ಗೊತ್ತಿಲ್ಲ. ಜಿ.ಡಿ.ದೇವೇಗೌಡ ಬಿಟ್ಟರೆ ಬೇರೆ ಯಾರು ನನ್ನನ್ನ ಸಂಪರ್ಕಿಸಿಲ್ಲ ಎಂದರು.









