ಆಗಸ್ಟ್ ನಲ್ಲಿ 4 % ಕುಸಿದ GST : 1.12 ಲಕ್ಷ ಕೋಟಿ GST ಸಂಗ್ರಹ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಆಗಸ್ಟ್‌ನಲ್ಲಿ 4% ಕುಸಿದಿದ್ದು, ಒಟ್ಟು 1.12 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹವಾಗಿದೆ. ಹಿಂದಿನ ತಿಂಗಳಲ್ಲಿ ರೂ 1.16 ಲಕ್ಷ ಕೋಟಿ ಸಂಗ್ರಹವಾಗಿತ್ತು. ಜುಲೈನಲ್ಲಿ ಮಾರಾಟದ ಆಧಾರದ ಮೇಲೆ, ಕಳೆದ ವರ್ಷಕ್ಕಿಂತ ಸುಮಾರು 30% ಹೆಚ್ಚಾಗಿದೆ ಮತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಆರ್ಥಿಕತೆಯು ಚೇತರಿಕೆಯತ್ತ ಸಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೂ 2019 ರಲ್ಲಿ ಅನುಗುಣವಾದ ಅವಧಿಗಿಂತ 14% ಹೆಚ್ಚಾಗಿದೆ. ಜೂನ್ ಹೊರತುಪಡಿಸಿ, ಹೆಚ್ಚಿನ ರಾಜ್ಯಗಳಲ್ಲಿ ಕೋವಿಡ್ 2ನೇ ಅಲೆಯಿಂದಾಗಿ ಸ್ಥಳೀಯ ಲಾಕ್ ಡೌನ್ ಗಳ ಪರಿಣಾಮದಿಂದಾಗಿ ಮಾಸಿಕ ಜಿಎಸ್‌ಟಿ ಸಂಗ್ರಹವು ಕುಸಿದಿದ್ದರೂ ಮುಂದಿನ ದಿನಗಳಲ್ಲಿ ಚೇತರಿಕೆ ಕಾಣಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
125 ರೂಗಳ ವಿಶೇಷ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ – ಏನಿದರ ಮಹತ್ವ
ಸಂಗ್ರಹವಾದ 1.12 ಲಕ್ಷ ಕೋಟಿ ರೂಪಾಯಿಗಳಲ್ಲಿ ಕೇಂದ್ರ ಜಿಎಸ್‌ಟಿ 20,522 ಕೋಟಿ ರೂ.ಗಳಿದ್ದರೆ, ರಾಜ್ಯಗಳ ಪಾಲಿಗೆ 26,605 ಕೋಟಿ ರೂ.ಗಳು ಹಾಗೂ ಸಮಗ್ರ ಜಿಎಸ್‌ಟಿ 56,247 ಕೋಟಿ ರೂಪಾಯಿಗಳಾಗಿವೆ. ಇದರಲ್ಲಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 26,884 ಕೋಟಿ ರೂಪಾಯಿಗಳೂ ಸೇರಿವೆ. ಸೆಸ್ ರೂಪದಲ್ಲಿ 8,646 ಕೋಟಿ ರೂ.ಗಳು ಸಂಗ್ರಹವಾಗಿವೆ ಎಂದು ವಿತ್ತ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಜುಲೈ 2021ರಲ್ಲಿ ಜಿಎಸ್‌ಟಿಯ ಕಲೆಕ್ಷನ್ 1.16 ಲಕ್ಷ ಕೋಟಿ ರೂ. ಇತ್ತು. 2020ರ ಆಗಸ್ಟ್‌ನಲ್ಲಿ 86,449 ಕೋಟಿ ರೂ. ಗಳಷ್ಟಿದ್ದ ಜಿಎಸ್‌ಟಿ ಸಂಗ್ರಹ 2019ರ ಇದೇ ತಿಂಗಳಲ್ಲಿ 98,202 ಕೋಟಿ ರೂ. ಗಳಷ್ಟಿತ್ತು. ಸತತ ಒಂಬತ್ತು ತಿಂಗಳು ಲಕ್ಷ ಕೋಟಿಗೂ ಅಧಿಕ ಸಂಗ್ರಹ ಕಂಡಿತ್ತು.








