ಉಲ್ಟಾ ಹೊಡೆದ ತಾಲಿಬಾನ್ – ಹೊಲಸು ನಾಲಿಗೆಯಲ್ಲಿ ಕಾಶ್ಮೀರದ ಬಗ್ಗೆ ಹೇಳಿಕೆ..! “ಕಾಶ್ಮೀರದಲ್ಲಿನ ಮುಸ್ಲಿಮರ ಪರ ಧ್ವನಿ ಎತ್ತುತ್ತೇವೆ”..!
ತಾಲಿಬಾನಿಗಳು ಸಂಪೂರ್ಣವಾಗಿ ಅಫ್ಗಾನ್ ಮೇಲೆ ಹಿಡಿತ ಸಾಧಿಸಿದ ನಂತರ ಅವರ ಅಸಲಿ ರೂಪ ಒಂದೊಂದಾಗಿಯೇ ಬಯಲಾಗ್ತಿದೆ.. ಮಹಿಳೆಯರಿಗೆ ಗೌರವಿಸುತ್ತೇವೆ ಅವರ ಹಕ್ಕು ಕಾಪಾಡುತ್ತೇವೆ ಎಂದವರು ಮಹಿಳೆಯರ ಹಕ್ಕುಗಳನ್ನ ಒಂದೊಂದಾಗಿಯೇ ಕಿತ್ತುಕೊಂಡು ಬಂದಿದ್ದಾರೆ. ಅದೆಲ್ಲಾ್ರೂ ಹೋಗ್ಲಿ ಪಾಕಿಸ್ತಾನ , ಚೈನಾದ ಸಪೋರ್ಟ್ ಪಡೆದು ಅಫ್ಗಾನ್ ಮೇಲೆ ಹಿಡಿತ ಸಾಧಿಸಿರುವುದು , ಸಹಜವಾಗಿಯೇ ಭಾರತಕ್ಕೆ ಎಚ್ಚರಿಕೆ ಗಂಟೆಯೇ. ಯಾಕಂದ್ರೆ ಪಾಕಿಸ್ತಾನಕ್ಕೆ ಬಾರತದ ಕಾಶ್ಮೀರದ ಮೇಲೆ ಕಣ್ಣು.. ಚೀನಾಗೆ ಭಾರತದ ಏಳಿಗೆ ಸಹಿಸೋಕಾಗದೇ ಉರಿ.
ಈ ನಡುವೆ ಭಾರತದ ವಿರುದ್ಧ ಪಿತೂರಿ ಮಾಡುತ್ತವೆ ಅನ್ನೋದು ಸಹಕವಾಗಿಯೇ ಊಹಿಸಬಹುದು.. ಆದ್ರೆ ಇತ್ತೀಚೆಗೆ ತಾಲಿಬಾನಿಗಳು ನಾವು ಭಾರತ ಪಾಕಿಸ್ತಾನದ ಆಂತರಿಕ ವಿಚಾರಕ್ಕೆ ತಲೆ ಹಾಕಲ್ಲ. ಕಾಶ್ಮೀರದ ವಿಚಾರಕ್ಕೆ ಬರಲ್ಲ ಅಂದಿದ್ದವರು ಇದೀಗ ಅದೇ ಹೊಲ ನಾಲಿಗೆಯಲ್ಲಿ ಕಾಶ್ಮೀರದ ವಿಚಾರವನ್ನ ಎತ್ತಿದ್ದಾರೆ. ಹೌದು ಕಾಶ್ಮೀರ ವಿಚಾರ ನಮಗೆ ಸಂಬಂಧವೇ ಇಲ್ಲ ಅಂತ ಹೇಳಿ ಎರಡೇ ದಿನ ಆಗಿಲ್ಲ.. ಆಗ್ಲೇ ವರಸೆ ಚೇಂಜ್ ಮಾಡಿದ್ದಾರೆ.
ಬಿಬಿಸಿ ಉರ್ದು ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರೋ ತಾಲಿಬಾನ್ ವಕ್ತಾರ ಸುಹೇಲ್ ಶಹೀನ್, ಕಾಶ್ಮೀರದ ಮುಸ್ಲಿಮರ ವಿಚಾರದಲ್ಲಿ ಧ್ವನಿ ಎತ್ತೋ ಹಕ್ಕು ನಮಗೆ ಇದೆ ಅಂತ ಹೇಳಿದ್ದಾನೆ. ಜಗತ್ತಿನೆಲ್ಲೆಡೆ ಇರೋ ಮುಸ್ಲಿಮರು, ಅದು ಕಾಶ್ಮೀರ, ಭಾರತ ಅಥವಾ ಜಗತ್ತಿನ ಯಾವುದೇ ಭಾಗ ಆಗಿರಲಿ. ಅಲ್ಲಿರುವ ಮುಸ್ಲಿಮರಿಗಾಗಿ ಧ್ವನಿ ಎತ್ತೋ ಅಧಿಕಾರ ನಮಗೆ ಇದೆ ಅಂತ ಹೇಳಿದ್ದಾರೆ.
ಆದ್ರೆ ಹೀಗೆ ಹೇಳಿದ ಮೇಲೆ ನಾವು ಯಾವುದೇ ದೇಶದ ವಿರುದ್ಧ ಶಸ್ತ್ರ ಎತ್ತೋದಿಲ್ಲ ಅಂತ ಕೂಡ ಹೇಳಿಕೊಂಡಿದ್ದಾನೆ. ಕಾಶ್ಮಿರದ ಮುಸ್ಲಿಂರಿಗಾಗಿ ನಮ್ಮ ಸಂಘಟನೆ ಧ್ವನಿ ಎತ್ತುತ್ತದೆ. ಕಾಶ್ಮೀರ ಮಾತ್ರವಲ್ಲದೇ ಎಲ್ಲಿಯಾದರೂ ಮುಸ್ಲಿಂರಿಗೆ ಅನ್ಯಾಯವಾದರೆ ಅವರ ಪರವಾಗಿ ಧ್ವನಿ ಎತ್ತುವುದು ನಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಹೇಳಿಕೊಂಡಿದ್ದಾರೆ. ಆದ್ರೆ ವಿಶ್ವದ ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸುವ ನೀತಿಯನ್ನು ತಾಲಿಬಾನ್ ಹೊಂದಿಲ್ಲ ಎಂದು ದ್ವಂದ್ವ ಹೇಳಿಕೆ ನೀಡಿ ನುಣುಚಿಕೊಂಡಿದ್ದಾರೆ.