ಟೋಕಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಮತ್ತೊಂದು ಪದಕ Manoj Sarkar saaksha tv
ಜಪಾನ್ : ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರೆದಿದೆ.
ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಲ್3 ವಿಭಾಗದಲ್ಲಿ ಪ್ರಮೋದ್ ಭಗತ್ ಚಿನ್ನದ ಪದಕ ಗೆದ್ದ ಬೆನ್ನಲ್ಲೇ ಮತ್ತೋರ್ವ ಬ್ಯಾಡ್ಮಿಂಟನ್ ಆಟಗಾರ ಮನೋಜ್ ಸರ್ಕಾರ್ ಕಂಚಿಗೆ ಮುತ್ತಿಟ್ಟಿದ್ದಾರೆ.
ಜಪಾನ್ ನ ಡೈಸುಕೆ ಫುಜಿಹಾರಾ ವಿರುದ್ಧ ಮನೋಜ್ 22-20, 21-13 ಪಾಯಿಂಟ್ ಗಳ ನೇರ ಸೆಟ್ ನಿಂದ ಜಯ ಸಾಧಿಸಿ, ಕಂಚನ್ನ ಮುಡಿಗೇರಿಸಿಕೊಂಡಿದ್ದಾರೆ.
ಇತ್ತ ಮನೋಜ್ ಸರ್ಕಾರ್ ಕಂಚು ಪದಕ ಗೆಲ್ಲುತ್ತಿದ್ದಂತೆ ಪ್ರಧಾನಿ ನರೇಂದ್ರ ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ.









