600 ಉಗ್ರರ ಹತ್ಯೆ | ಪಂಜ್ಶೀರ್ ನಲ್ಲಿ ತಾಲಿಬಾನಿಗಳ ಬೇಟೆ Taliban saaksha tv
ಕಾಬೂಲ್ : ಪಂಚ್ ಶೀರ್ ಮೇಲೆ ಹಿಡಿತ ಸಾಧಿಸಲು ಹೋರಾಡುತ್ತಿರುವ ತಾಲಿಬಾನ್ ಗಳಿಗೆ ಪಂಜ್ಶೀರ್ ಪಡೆ ಮುಟ್ಟಿನೋಡಿಕೊಳ್ಳುವಂತಹ ತಿರುಗೇಟು ನೀಡುತ್ತಿದೆ.
ಪಂಚ್ ಶೀರ್ ಪಡೆ ಮತ್ತು ತಾಲಿಬಾನ್ ಉಗ್ರರ ಮಧ್ಯೆ ನಡೆಯುತ್ತಿರುವ ಹೋರಾಟದಲ್ಲಿ ಈ ವೇಳೆ ಅಂದಾಜು 600ಕ್ಕೂ ಹೆಚ್ಚು ತಾಲಿಬಾನಿಗಳನ್ನು ಪಂಜಶೀರ್ ಪಡೆ ಬೇಟೆಯಾಡಿದೆ.
ಅಲ್ಲದೆ ಒಂದು ಸಾವಿರಕ್ಕೂ ಅಧಿಕ ಉಗ್ರರನ್ನು ಸೆರೆ ಹಿಡಿಯಲಾಗಿದೆ ಎಂದು ಪ್ರತಿರೋಧ ಪಡೆಗಳ ವಕ್ತಾರ ಫಹಿಮ್ ದಷ್ಟಿ ಮಾಹಿತಿ ನೀಡಿದ್ದಾರೆ.
ಅಂಹಹಾಗೆ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳಿಗೆ ಪಂಜ್ಶೀರ್ ಕಬ್ಬಿಣದ ಕಡಲೆಯಾಗಿದೆ.
ಪಂಜಶೀರ್ ನಲ್ಲಿ ಭೂ ಗಣಿಗಳು ಹೆಚ್ಚಿರುವುದರಿಂದ ತಾಲಿಬಾನ್ ಆಕ್ರಮಣ ಮಂದಗತಿಯಲ್ಲಿ ಸಾಗಿದೆ.









