ಜಾಗತಿಕ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮೋದಿ ನಂ.1 , ಜೋ ಬೈಡೆನ್ ಗೆ 5ನೇ ಸ್ಥಾನ..!
ವಿಶ್ವದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಗೆಯಲ್ಲಿ 7 ಕೋಟಿಗೂ ಹೆಚ್ಚು ಫಾಲೋವರ್ ಗಳಾಗಿದ್ದಾರೆ. ಈ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವದ ಸಕ್ರಿಯ ರಾಜಕಾರಣಿ ವಿಶ್ವನಾಯಕ ಎನಿಸಿಕೊಂಡಿದ್ದ ನಮೋ ಇದೀಗ ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಜಾಗತಿಕ ನಾಯಕರ ಅನುಮೋದನೆ ರೇಟಿಂಗ್ ನಲ್ಲಿ ಮೋದಿ ಅವರಿಗೆ ಶೇಕಡ 70ರಷ್ಟು ಅಂಕಗಳು ಸಿಕ್ಕಿದೆ. ಇದು ಉತ್ತಮ ನಾಯಕ ಎಂದು ಒಪ್ಪುವ ಜನರ ಪ್ರಮಾಣವೂ ಆಗಿದೆ. ಆಗಸ್ಟ್ 23ರಂದು ಈ ಪ್ರಮಾಣವು ಶೇಕಡ 72ರಷ್ಟಿತ್ತು. ಅಮೆರಿಕದ ಮಾಹಿತಿ ಗುಪ್ತಚರ ಕಂಪನಿ ಮಾರ್ನಿಂಗ್ ಕನ್ಸಲ್ಟ್ ಈ ಬಗ್ಗೆ ವಿವರಗಳನ್ನು ಒದಗಿಸಿದೆ.
ತಾಲಿಬಾನ್ ಉಗ್ರರಿಗೆ ಸರ್ಕಾರ ರಚನೆ ಮಾಡೊದಕ್ಕೆ ಎಲ್ಲಾ ಸಹಾಯ ಮಾಡುತ್ತಂತೆ ‘ಭಿಕಾರಿ’ ಪಾಕಿಸ್ತಾನ
ಚುನಾವಣೆಯಲ್ಲಿ ಆಯ್ಕೆಯಾದ 13 ರಾಷ್ಟ್ರಗಳ ನಾಯಕರ ರಾಷ್ಟ್ರೀಯ ರೇಟಿಂಗ್ಸ್ಆಧಾರದ ಮೇಲೆ ಈ ರ್ಯಾಂಕಿಂಗ್ ನೀಡಿದೆ. ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುಲ್ ಲೋಪೆಜ್ ಒಬ್ರಡಾರ್ ಅವರಿಗೆ ಶೇಕಡ 64ರಷ್ಟು ಅನುಮೋದನೆಯ ರೇಟಿಂಗ್ ದೊರೆತಿದ್ದು, 2ನೇ ಸ್ಥಾನದಲ್ಲಿದ್ದಾರೆ. ಇಟಲಿ ಪ್ರಧಾನಿ ಮ್ಯಾರಿಯೊ ದ್ರಾಘಿ ಅವರಿಗೆ ಶೇಕಡ 63( 3ನೇ ಸ್ಥಾನ) ಮತ್ತು ಜರ್ಮನ್ ಚಾನ್ಸಲರ್ ಏಂಜಲಾ ಮರ್ಕೆಲ್ ಅವರಿಗೆ ಶೇಕಡ 52ರಷ್ಟು (4ನೇ ಸ್ಥಾನ) ಅನುಮೋದನೆಯ ರೇಟಿಂಗ್ ದೊರೆತಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರ್ರಿಸನ್ ಗೆ ಶೇಕಡ 48 ಅನುಮೋದನೆಯ ರೇಟಿಂಗ್ ಸಿಕ್ಕಿದೆ. ಈ ಮೂಲಕ ಇಬ್ಬರೂ 5ನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ , ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ , ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜಾ–ಇನ್, ಸ್ಪೇನ್ ಪ್ರಧಾನಿ ಪೆಡ್ರೊ ಸಾಂಛೇಜ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ , ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಸ್ಥಾನ ಪಡೆದುಕೊಂಡಿದ್ದಾರೆ.








