ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30,000 ದಾಟಿದ್ದು, 1,008 ಮಂದಿ ಮೃತಪಟ್ಟಿದ್ದಾರೆ. ಇದೀಗ ಕೇರಳದಲ್ಲೂ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹರಿ ಹಾಯ್ದಿದ್ದಾರೆ.
ಕೇರಳ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿ.ಎಲ್. ಸಂತೋಷ್, ಕೇರಳ ನಿಧಾನವಾಗಿ ಅಪಾಯದತ್ತ ಜಾರುತ್ತಿದೆ. ಕೊಟ್ಟಾಯಂ, ತಿರುವನಂತಪುರಂ, ಇಡುಕ್ಕಿ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇಡೀ ರಾಜ್ಯವೇ ಕೆಂಪು ವಲಯವಾಗುತ್ತಿದೆ. 20,000 ಕೋಟಿ ರೂಪಾಯಿಗಳ ಪ್ಯಾಕೇಜ್ ನ್ನು ಗಾಳಿಗೆ ತೂರಲಾಗಿದೆ. ಏಳಿ ಪಿಣರಾಯಿ ವಿಜಯನ್ ಎಂದು ಕುಟುಕಿದ್ದಾರೆ.
ಇದಲ್ಲದೆ ಸರಣಿ ಟ್ವೀಟ್ ಗಳನ್ನು ಮಾಡಿ ದೇಶದ ಬೇರೆ ಬೇರೆ ರಾಜ್ಯಗಳ ಸ್ಥಿತಿಗಳನ್ನು ಕೂಡ ಬಿ.ಎಲ್. ಸಂತೋಷ್ ತಿಳಿಸಿದ್ದಾರೆ.








